ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ ಘಟನೆ ನಡೆದಿದ್ದು, ತಪಾಸಣೆಯ ಬಳಿಕ ಇದು ಹುಸಿ ಕರೆ ಎಂಬುದು ಸಾಬೀತಾಗಿದೆ.
ಬೆದರಿಕೆ ಕರೆ ಹಿನ್ನೆಲೆಯಲ್ಲಿ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ರೈಲನ್ನು ತೀವ್ರ ತಪಾಸಣೆ ನಡೆಸಲಾಗಿದೆ.
ಮಂಗಳವಾರ ಸಂಜೆ ಆಗ್ರಾದ ರೈಲ್ವೆ ನಿಯಂತ್ರಣ ಕೊಠಡಿಯಿಂದ ಕರ್ನಾಟಕದ ಸರ್ಕಾರಿ ರೈಲ್ವೆ ಪೊಲೀಸ್(GRP)ಗೆ ಹುಸಿ ಬಾಂಬ್ ಬೆದರಿಕೆ ಕರೆ ಬಗ್ಗೆ ಮಾಹಿತಿ ನೀಡಲಾಗಿದೆ.
ರೈಲಿನಲ್ಲಿರುವ ತನ್ನ ಪುರುಷ ಸಂಬಂಧಿಯೊಬ್ಬರ ಬಳಿ ಬಾಂಬ್ ಇದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ಕಂಟ್ರೋಲ್ ರೂಮ್ ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ರೈಲನ್ನು ತಪಾಸಣೆ ನಡೆಸಿದ್ದಾರೆ.