ಫೆಬ್ರವರಿ 4ರಂದು ಬೊಳ್ಮಿನಾರ್ ಉರೂಸ್

Prasthutha|

ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು ಗ್ರಾಮ ಬೊಳ್ಮನಾರ್ ಶುಹದಾನಗರ ಮಖಾಂ ಉರೂಸ್ ಫೆಬ್ರವರಿ 2ರಿಂದ ಫೆಬ್ರವರಿ 4ರವರೆಗೆ ಜರಗಲಿದೆ.

- Advertisement -

ಫೆಬ್ರವರಿ 2 ರಂದು ಬೆಳಗ್ಗೆ 10.30 ಕ್ಕೆ ಜಮಾಅತ್ ಅಧ್ಯಕ್ಷ ಅಬ್ದುಲ್ ಗಫೂರ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿ ಸ್ಥಳೀಯ ಖತೀಬರಾದ ಅಹ್ಮದ್ ಅಲಿ ಇರ್ಫಾನಿ ಉದ್ಘಾಟಿಸಲಿದ್ದಾರೆ. ಜಮಲಾಬಾದ್ ಖತೀಬರಾದ ಅಬ್ದುಲ್ ಖಾದರ್ ಮಿಸ್ಬಾಹಿ ಮುಖ್ಯ ಭಾಷಣ ಮಾಡಲಿದ್ದಾರೆ.

ಫೆಬ್ರವರಿ 3ರಂದು ಝೈದ್ ಬಾ ಹಸನಿ ಕಕ್ಕಿಂಜೆ ಪ್ರಭಾಷಣ ಮಾಡಲಿದ್ದಾರೆ. ಸಮಾರೋಪ ಸಮಾರಂಭವು ಫೆಬ್ರವರಿ 4 ರಾತ್ರಿ 7 30ಕ್ಕೆ ಆರಂಭವಾಗಲಿದೆ. ಸಯ್ಯಿದ್ ಜಮಲುಲ್ಲೈಲಿ ಝೈನುಲ್ ಆಬಿದೀನ್ ತಂಙಳ್ ಕಾಜೂರು ಅಧ್ಯಕ್ಷತೆ ಮತ್ತು ದುವಾ ನೇತೃತ್ವ ನೀಡಲಿದ್ದಾರೆ.

- Advertisement -

ಈಶ್ವರಮಂಗಳ ಟೌನ್ ಜುಮಾ ಮಸೀದಿ ಖತೀಬರಾದ ನಝೀರ್ ಅಝ್ಹರಿ ಬೊಳ್ಮಿನಾರ್ ಉದ್ಘಾಟನೆಗೈಯಲಿದ್ದಾರೆ. ಖ್ಯಾತ ವಾಗ್ಮಿ ಅಬ್ದುಲ್ ಕರೀಂ ಫೈಝಿ ಕುಂತೂರು ಮುಖ್ಯ ಭಾಷಣ ನಡೆಸಲಿದ್ದಾರೆ. ಸಮಾರಂಭದಲ್ಲಿ ವಕ್ಫ್ ಜಿಲ್ಲಾ ಅಧ್ಯಕ್ಷರಾದ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷರಾದ ಫಕೀರಬ್ಬ ಮಾಸ್ಟರ್, ಜಮಾಲ್, ಸದಸ್ಯರಾದ ಸಿದ್ಧೀಖ್ ಕಾಜೂರು, ಮೂಸಾ ದಾರಿಮಿ ಕಕ್ಕಿಂಜೆ, ಇಬ್ರಾಹಿಂ ಸಖಾಫಿ ಕನ್ಯಾಡಿ, ಶಂಸುದ್ದೀನ್ ಅಶ್ರಫಿ ಕಕ್ಕಿಂಜೆ, ಎಸ್ ಎಂ ಕೋಯ ತಂಙಳ್ ಉಜಿರೆ, ಮುಹಮ್ಮದ್ ಶರ್ವಾನಿ ನೆರಿಯ, ಸಲೀಂ ಫೈಝಿ ಜಲಾಲಿಯನಗರ, ಹನೀಫ್ ಮದನಿ ಕಾಯರ್ತಡ್ಕ, ಬಿ ಎಂ ಹಮೀದ್ ಉಜಿರೆ, ತಾಲೂಕು ಉಕ್ಕೂಟದ ಅಧ್ಯಕ್ಷರಾದ ನಝೀರ್ ಬೆಳ್ತಂಗಡಿ, ಹಮೀದ್ ಇಂಜಿನಿಯರ್, ರಝಾಕ್ ದೂಮ್ ದಮಾಕ, ಸಿದ್ದೀಖ್ ಕನ್ಯಾಡಿ, ನಾಸಿರ್ ಮಾಸ್ಟರ್ ಉಪ್ಪಿನಂಗಡಿ, ಅಬೂಬಕರ್ ಕೋಲ್ಪೆ, ಅಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಹೈದರ್ ಕೊಕ್ಕಡ ಮುಂತಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಬೊಳ್ಮನಾರ್ ಜಮಾಅತ್ ಕಾರ್ಯದರ್ಶಿ ಸಿಧ್ಧೀಖ್ ಎಯು ಅಲಪಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp