ಬಾಲಿವುಡ್‌ ನಟಿ, ಮೋಡೆಲ್ ಪೂನಂ ಪಾಂಡೆ ಕ್ಯಾನ್ಸರ್‌’ಗೆ ಬಲಿ

Prasthutha|

ನವದೆಹಲಿ: ಸದಾಸುದ್ದಿಯಲ್ಲಿದ್ದ ಮೋಡೆಲ್, ಬಾಲಿವುಡ್ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ. ಸಾವಿನ ಸುದ್ದಿಯನ್ನು ಮೊದಲು ಅವರ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ ಬಹಿರಂಗಪಡಿಸಲಾಗಿದೆ. ಆದರೂ ಕೆಲ ಮಾಧ್ಯಮಗಳು ಸುದ್ದಿಯ ನೈಜತೆ ಬಗ್ಗೆ ಅನುಮಾನಗೊಂಡಿತ್ತು. ಕೊನೆಗೂ ಸುದ್ದಿ ನಿಜವೆಂದು ದೃಢವಾಗಿದೆ.

- Advertisement -

“ಈ ಬೆಳಿಗ್ಗೆ ನಮಗೆ ಕಠಿಣವಾಗಿದೆ. ಗರ್ಭಕಂಠದ ಕ್ಯಾನ್ಸರ್ನಿಂದ ನಮ್ಮ ಪ್ರೀತಿಯ ಪೂನಂ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ತುಂಬಾ ದುಃಖವಾಗಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಿಯನ್ನು ಶುದ್ಧ ಪ್ರೀತಿ ಮತ್ತು ದಯೆಯಿಂದ ಕಂಡಿದ್ದರು. ಈ ದುಃಖದ ಸಮಯದಲ್ಲಿ, ನಾವು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವಾಗ ನಮ್ಮ ಖಾಸಗಿತನಕ್ಕಾಗಿ ವಿನಂತಿಸುತ್ತೇವೆ” ಎಂದು ನಟಿಯ ಅಧಿಕೃತ ಇಸ್ಟ್ರಾಗ್ರಾಮ್ ಪೋಸ್ಟ್ನಲ್ಲಿ ಬೆಳಿಗ್ಗೆ ಬರೆಯಲಾಗಿತ್ತು.

ಪೂನಂ ಪಾಂಡೆ ಜನಪ್ರಿಯ ರೂಪದರ್ಶಿಯಾಗಿದ್ದರು. 2011 ರ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಮುಂಚಿತವಾಗಿ ವೀಡಿಯೊ ಸಂದೇಶದಲ್ಲಿ ಆಕೆ, ಭಾರತವು ಫೈನಲ್ ಪಂದ್ಯವನ್ನು ಗೆದ್ದರೆ ಬಟ್ಟೆ ಬಿಚ್ಚುವುದಾಗಿ ಭರವಸೆ ನೀಡಿ ಸುದ್ದಿಯಾಗಿದ್ದರು. ತನ್ನ ಹೇಳಿಕೆಗಳೊಂದಿಗೆ ಮತ್ತು ಬೋಲ್ಡ್ ಅವತಾರಗಳಲ್ಲಿ ಪೂನಂ ಪಾಂಡೆ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್‌ಗಳಲ್ಲಿ ಗಮನ ಸೆಳೆಯುತ್ತಿದ್ದರು.

Join Whatsapp