ಅಂಗರಕ್ಷಕ ಸಾವು ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಸುವೇಂದು ಅಧಿಕಾರಿಗೆ ಸಿಐಡಿ ಸಮನ್ಸ್

Prasthutha|

ಕೊಲ್ಕತ್ತಾ: ಅಂಗರಕ್ಷಕ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ವಿಧಾನಸಭೆ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿಗೆ ಸಿಐಡಿ ಸಮನ್ಸ್ ಜಾರಿ ಮಾಡಿದೆ.

- Advertisement -

ಸೋಮವಾರ ಕೊಲ್ಕತ್ತಾದಲ್ಲಿನ ಭವಾನಿ ಭವನ್ ನಲ್ಲಿರುವ ಸಿಐಡಿ ಕೇಂದ್ರ ಕಚೇರಿಯಲ್ಲಿ ವಿಚಾರಣಾಧಿಕಾರಿಗಳ ಮುಂದೆ ಹಾಜರಾಗುವಂತೆ ಸುವೇಂದುಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಸುವೇಂದು ಅಧಿಕಾರಿ ಅಂಗರಕ್ಷಕ ಸುಬಾಭ್ರತಾ ಚಕ್ರವರ್ತಿ ತನ್ನ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ. ಈ ಪ್ರಕರಣದ ತನಿಖೆಗಾಗಿ ತಂಡವೊಂದನ್ನು ಸಿಐಡಿ ರಚಿಸಿತ್ತು. ತನ್ನ ಪತಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಚಕ್ರವರ್ತಿ ಪತ್ನಿ ಕಾಂಟೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

- Advertisement -

ರಾಜ್ಯಶಸ್ತ್ರಾಸ್ತ್ರ ಪೊಲೀಸ್ ಸಿಬ್ಬಂದಿಯಾಗಿದ್ದ ಚಕ್ರವರ್ತಿ, ಅಧಿಕಾರಿ ಟಿಎಂಸಿಯ ಸಂಸದರಾಗಿದ್ದ ಅವಧಿಯಲ್ಲಿ ಭದ್ರತಾ ತಂಡದಲ್ಲಿದ್ದರು. 2015ರಲ್ಲಿ ಅಧಿಕಾರಿ ಸಚಿವರಾದಾಗಲೂ ಭದ್ರತಾ ಸಿಬ್ಬಂದಿಯಾಗಿ ಮುಂದುವರೆದಿದ್ದರು.

Join Whatsapp