ಕೆರೆಯಲ್ಲಿ ತಲೆ, ಕೈಕಾಲುಗಳಿಲ್ಲದ ಶವ ಪತ್ತೆ

Prasthutha|

ಚೆನ್ನೈ: ಭಯಾನಕ ಘಟನೆಯೊಂದು ತಮಿಳುನಾಡಿನ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಕೆರೆಯಲ್ಲಿ ತಲೆ ಮತ್ತು ಕೈಕಾಲುಗಳಿಲ್ಲದ ಶವ ಪತ್ತೆಯಾಗಿದ್ದು, ಜನರನ್ನು ತಲ್ಲಣಗೊಳಿಸಿದೆ. ಶವದ ಹೊಟ್ಟೆಯಲ್ಲಿ ಇರಿತದ ಗಾಯವಿದೆ.

- Advertisement -

ಮೀನುಗಾರರ ಗುಂಪು ಚೆನ್ನೈನ ಚೆಂಬರಂಬಕ್ಕ ಸರೋವರದಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಬಳಿಕ ತೀವ್ರ ಹುಡುಕಾಟ ನಡೆಸಿದಾಗ ದೇಹದ ಕಾಲು ಸಹ ಪತ್ತೆಯಾಗಿದೆ.

ಸಾವನ್ನಪ್ಪಿದ ವ್ಯಕ್ತಿಗೆ ಸುಮಾರು 30 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ಕೈ‌ಕಾಲು , ತಲೆ ಕತ್ತರಿಸಿ ಬಂಡೆಗೆ ಕಟ್ಟಿ ಕೆರೆಗೆ ಎಸೆಯಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

- Advertisement -

Join Whatsapp