ಹಾವೇರಿ: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಮೂವರು ಯುವಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ವಿಕಾಸ್ ಪಾಟೀಲ್ (20 ವರ್ಷ), ನವೀನ್ ಕುರಗುಂದ (20) ಮತ್ತು ನೆಪಾಳದ ಮೂಲದ ಪ್ರೇಮ್ ಬೋರಾ (25) ಮೃತದೇಹಗಳು ಪತ್ತೆಯಾಗಿವೆ.
ನೀರುಪಾಲಾದ ಯುವಕರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಿರಂತರವಾಗಿ ಶೋಧಕಾರ್ಯ ನಡೆಸಿದ್ದರು.
ಹೊಸ ವರ್ಷ ನಿಮಿತ್ತ ಜನವರಿ 1 ರಂದು ಪಾರ್ಟಿ ಮಾಡಲು ತುಂಗಭದ್ರಾ ನದಿಯ ಪಂಪಹೌಸ್ ಬಳಿ ಯುವಕರು ಹೋಗಿದ್ದರು.
ಅಲ್ಲಿಂದ ಈಜಲು ಹೋದ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.