ಉತ್ತರಾಖಂಡ; 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ

Prasthutha|

ಬೆಂಗಳೂರು: ಹಿಮಪಾತದಿಂದ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ತ್ರತಾಲ್ ಚಾರಣಕ್ಕೆ ತೆರಳಿದ್ದ 20 ಜನರ ಪೈಕಿ 9 ಮಂದಿ ಸಾವನ್ನಪ್ಪಿದ್ದು, ಮೃತ ಚಾರಣಿಗರ ಮೃತದೇಹವನ್ನು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ ರವಾನಿಸುವ ಸಲುವಾಗಿ ಉತ್ತರಾಖಂಡ ಮುಖ್ಯಕಾರ್ಯದರ್ಶಿ ರಾಧಾ ರಾತುರಿ ಅವರ ಜೊತೆ ಕೃಷ್ಣಬೈರೇಗೌಡ ಮಾತುಕತೆ ನಡೆಸಿದ್ದಾರೆ.
ಮಾತುಕತೆ ಬಳಿಕ ಉತ್ತರಾಖಂಡ ಮುಖ್ಯಕಾರ್ಯದರ್ಶಿ ಚಾರ್ಟರ್ ಫ್ಲೈಟ್ ಮೂಲಕ ಮೃತದೇಹವನ್ನು ಸಾಗಿಸಲು ಒಪ್ಪಿಕೊಂಡಿದ್ದಾರೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.

- Advertisement -

ಉತ್ತರಕಾಶಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಗೆ ಎಲ್ಲಾ 9 ಮೃತದೇಹಗಳನ್ನು ವಿಮಾನದಲ್ಲಿ ಡೆಹ್ರಾಡೂನ್ ಗೆ ತರಲಾಗುವುದು. ಡೆಹ್ರಾಡೂನ್ ನಲ್ಲಿ ಎಂಬಾಮಿಂಗ್ ಮಾಡಲಾಗುವುದು. ಎಲ್ಲಾ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಚಾರ್ಟರ್ ಫ್ಲೈಟ್ ಅನ್ನು ಗುರುತಿಸುತ್ತಿದ್ದೇವೆ. ನಾನೀಗ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಲು ಹೊರಟಿದ್ದೇನೆ. ಮುಖ್ಯ ಕಾರ್ಯದರ್ಶಿಯವರೊಂದಿಗಿನ ನನ್ನ ಸಭೆಯ ನಂತರ ಮೃತದೇಹಗಳ ರವಾನೆಯ ಬಗ್ಗೆ ಸ್ಪಷ್ಟತೆ ನೀಡಬಹುದು ಎಂದು ನಾನು ಭಾವಿಸುತ್ತೇನೆ ಎಂದು ಕೃಷ್ಣಬೈರೇಗೌಡ ಎಕ್ಸ್ ನಲ್ಲಿ ಟ್ವೀಟ್ ಮಾಡಿ ತಿಳಿಸಿದ್ದರು.



Join Whatsapp