ಚರಂಡಿಯಲ್ಲಿ ತೇಲಿಬಂತು 7 ಭ್ರೂಣಗಳ ಮೃತದೇಹ: ಬೆಚ್ಚಿಬಿದ್ದ ಜನ !

Prasthutha|

ಬೆಳಗಾವಿ: ಏಳು ಭ್ರೂಣಗಳ ಮೃತದೇಹಗಳು ಚರಂಡಿಯಲ್ಲಿ ತೇಲಿ ಬಿಟ್ಟಿರುವ ಹೀನಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಬೆಳಕಿಗೆ ಬಂದಿದೆ.

- Advertisement -


ಭ್ರೂಣಗಳ ಮೃತದೇಹಗಳನ್ನು ದುಷ್ಕರ್ಮಿಗಳು ಚರಂಡಿಗೆ ಡಬ್ಬದಲ್ಲಿ ಹಾಕಿ ಬಿಡಲಾಗಿದ್ದು, ಶವ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. ಒಟ್ಟು ಐದು ಡಬ್ಬಿಗಳಲ್ಲಿ ಏಳು ಭ್ರೂಣಗಳನ್ನು ಹಾಕಿ ಹಳ್ಳಕ್ಕೆ ಎಸೆಯಲಾಗಿದೆ.


ಮೂಡಲಗಿ ಪಟ್ಟಣದ ಸೇತುವೆ ಕೆಳಗೆ ಐದು ಡಬ್ಬಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಇದು ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣಗಳ ಹತ್ಯೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ. ಇವೆಲ್ಲವೂ ಐದು ತಿಂಗಳ ಭ್ರೂಣಗಳಾಗಿವೆ ಎಂದು ಡಿಎಚ್ ಒ ಡಾ.ಮಹೇಶ ಕೋಣಿ ಹೇಳಿದ್ದಾರೆ.
ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Join Whatsapp