ಸ್ಪೈಸ್ ಜೆಟ್ ವಿಮಾನದೊಳಗೆ ಸಿಗರೇಟ್ ಸೇವನೆಯ ವೀಡಿಯೋ ವೈರಲ್: ತನಿಖೆಗೆ ಆದೇಶ

Prasthutha|

ನವದೆಹಲಿ: ದೆಹಲಿ – ದುಬೈ ನಡುವಿನ ಸ್ಪೈಸ್’ಜೆಟ್ ವಿಮಾನದೊಳಗೆ ಬಾಡಿಬಿಲ್ಡರ್ ಬಾಬಿ ಕಟಾರಿಯ ಅವರು ಸಿಗರೇಟ್ ಸೇದುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕುರಿತು ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆದೇಶಿಸಿದ್ದಾರೆ.

- Advertisement -

ಜನವರಿ 20 ರಂದು ಸ್ಪೈಸ್’ಜೆಟ್ ವಿಮಾನದ ಹಿಂದಿನ ಸಾಲಿನಲ್ಲಿ ಪ್ರಯಾಣಿಕರು ವಿಮಾನವನ್ನು ಹತ್ತುವಾಗ ಕ್ರೀಡಾಪಟು ಕಟಾರಿಯ ಅವರು ಸಿಗರೇಟ್’ಗೆ ಬೆಂಕಿ ಹಚ್ಚುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಈ ವೀಡಿಯೋವ ವೈರಲ್ ಆದ ಬಳಿಕ ಸಚಿವ ಸಿಂಧಿಯಾ ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ತನಿಖೆಗೆ ಮಾಡಲಾಗುವುದು. ಅಂತಹ ಅಪಾಯಕಾರಿ ನಡೆಯನ್ನು ಸಹಿಸುವುದಿಲ್ಲ ಎಂದು ಟ್ವೀಟ್’ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಯಾಣಿಕರು ವಿಮಾನದೊಳಗೆ ಲೈಟರ್ ತೆಗೆದುಕೊಂಡು ಹೋಗಲು ಅಥವಾ ಧೂಮಪಾನ ಮಾಡಲು ಅನುಮತಿ ಇಲ್ಲವಾಗಿದೆ.

- Advertisement -

ಪ್ರಯಾಣಿಕರು ವಿಮಾನವನ್ನು ಹತ್ತುವಾಗ ಮತ್ತು ಕ್ಯಾಬಿನ್ ಸಿಬ್ಬಂದಿ ಟೇಕ್ ಆಪ್ ಕಾರ್ಯವಿಧಾನವನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ ಎಂದು ಸ್ಪೈಸ್’ಜೆಟ್ ಸಮಜಾಯಿಸಿ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ 15 ದಿನಗಳ ಕಾಲ ಕಟಾರಿಯಾ ಅವರನ್ನು ವಿಮಾನಯಾನ ಸಂಸ್ಥೆ ನಿಷೇಧದ ಪಟ್ಟಿಗೆ ಸೇರಿಸಿದೆ ಎಂದು ತಿಳಿಸಿದೆ.

ಸದ್ಯ ಕಟಾರಿಯ ವಿರುದ್ಧ ಗುರ್ಗಾಂವ್’ನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿ.ಐ.ಎಸ್.ಎಫ್. ತಿಳಿಸಿದೆ.



Join Whatsapp