ಟ್ರಂಪ್ ಗೆ ಮುಖಭಂಗ: ಅಧ್ಯಕ್ಷರ ವಿಟೊವನ್ನು ಅತಿಕ್ರಮಿಸಿ ಮತ ಚಲಾಯಿಸಿದ ಯುಎಸ್ ಕಾಂಗ್ರೆಸ್

Prasthutha|

ಪ್ರಮುಖ ರಕ್ಷಣಾ ಮಸೂದೆಯ ವಿರುದ್ಧ ಡೊನಾಲ್ಡ್ ಟ್ರಂಪ್ ರ ವಿಟೊವನ್ನು ಅತಿಕ್ರಮಿಸುವುದಕ್ಕಾಗಿ ಅಮೆರಿಕಾ ಕಾಂಗ್ರೆಸ್ ಮತ ಚಲಾಯಿಸಿದೆ. ಇದರೊಂದಿಗೆ ಅಮೆರಿಕಾ ಅಧ್ಯಕ್ಷರ ವಿರುದ್ಧ ಅವರದ್ದೇ ರಿಪಬ್ಲಿಕನ್ ಪಕ್ಷದ ಸದಸ್ಯರು ಛಿದ್ರಗೊಂಡ ಪ್ರಕ್ಷುಬ್ಧ ಶಾಸಕಾಂಗ ಅಧಿವೇಶನ ಕೊನೆಗೊಂಡಿದೆ.

- Advertisement -

ಅತ್ಯಂತ ಅಪರೂಪದ ಹೊಸ ವರ್ಷ ದಿನದ ಅಧಿವೇಶನದಲ್ಲಿ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಗೆ ಟ್ರಂಪ್ ಚಲಾಯಿಸಿದ ವೀಟೊವನ್ನು ಅತಿಕ್ರಮಿಸಲು ಅಗತ್ಯವಿದ್ದ ಮೂರನೆ ಎರಡರಷ್ಟು ಬಹುಮತವನ್ನು ತಲುಪುವುದಕ್ಕಾಗಿ ಸೆನಟ್ 81ರಿಂದ 13 ಮತಗಳನ್ನು ಹಾಕಿದೆ.

ಮುಂದಿನ ವರ್ಷಕ್ಕೆ ಅಮೆರಿಕಾದ ಸೇನೆ ಮತ್ತು ಕಾರ್ಯತಂತ್ರದ ದಿಕ್ಕನ್ನು ಸಿದ್ಧಪಡಿಸುವ 740 ಬಿಲಿಯನ್ ರಕ್ಷಣಾ ಮಸೂದೆಯನ್ನು ಬೆಂಬಲಿಸುವುದಕ್ಕಾಗಿ ಡೆಮಾಕ್ರಟ್ ಗಳು ಮತ್ತು ರಿಪಬ್ಲಿಕನ್ ಗಳು ಒಟ್ಟು ಸೇರಿದ್ದರು.

- Advertisement -

ರಿಪಬ್ಲಿಕನ್ ನಾಯಕನ ಅಧ್ಯಕ್ಷತೆಯಲ್ಲಿ ಯುಎಸ್ ಸಂಸದರು ಮೊದಲ ಬಾರಿಗೆ ಟ್ರಂಪ್ ವಿಟೊವನ್ನು ಅತಿಕ್ರಮಿಸಿದ್ದರು. ಈ ಹಿಂದೆ ಡಿಸೆಂಬರ್ 28ರಂದು ಡೆಮಾಕ್ರಟ್ ನಿಯಂತ್ರಿತ ಅಮೆರಿಕಾದ ಪ್ರತಿನಿಧಿಗಳ ಸಭೆಯಲ್ಲಿ ಈ ಮಸೂದೆ ಪರವಾಗಿ ಅಗಾಧವಾಗಿ ಮತ ಚಲಾವಣೆಗೊಂಡಿತ್ತು.

ವೈಟ್ ಹೌಸ್ ತೊರೆಯುವುದಕ್ಕೆ ಕೆಲವೇ ವಾರಗಳ ಮುಂಚೆ ಟ್ರಂಪ್ ಈ ಮಸೂದೆಗೆ ಹಲವು ಅಂಶಗಳ ವಿರೋಧಗಳನ್ನು ಎತ್ತಿದ್ದರು. ಅಫ್ಘಾನಿಸ್ತಾನ, ದಕ್ಷಿಣ ಕೊರಿಯಾ ಮತ್ತು ಜರ್ಮನಿಯಲ್ಲಿ ಅಮೆರಿಕಾ ಸೈನಿಕರನ್ನು ಕಡಿಮೆಗೊಳಿಸುವ ತನ್ನ ಸಾಮರ್ಥವನ್ನು ಮಿತಿಗೊಳಿಸುತ್ತದೆ ಎಂದು ಅವರು ಹೇಳಿದ್ದರು.

ಟ್ವಿಟ್ಟರ್ ಮತ್ತು ಫೇಸ್ಬುಕ್ ಗಳಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ವತಂತ್ರವಾಗಿ ಪೋಸ್ಟ್ ಹಾಕಬಹುದಾದ ಅಮೆರಿಕಾ ಸಂವಹನಾ ಕಾನೂನುಗಳ 230ನೆ ವಿಧಿಯನ್ನು ಕಾಂಗ್ರೆಸ್ ಹಿಂಪಡೆಯಬೇಕೆಂದು ಟ್ರಂಪ್ ಬಯಸಿದ್ದರು. ರಿಪಬ್ಲಿಕನ್ ನಿಯಂತ್ರಿತ ಸೆನಟ್ ತನ್ನ ವಿಟೊವನ್ನು ಅತಿಕ್ರಮಿಸುವುದಕ್ಕೆ ಟ್ರಂಪ್ ಟೀಕೆ ವ್ಯಕ್ತಪಡಿಸಿದ್ದಾರೆ.



Join Whatsapp