ರಾಣೇಬೆನ್ನೂರು | ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಿಂದ ರಕ್ತದಾನ

Prasthutha|

ರಾಣೇಬೆನ್ನೂರು: ಕೊರೊನಾದ ಎರಡನೇ ಅಲೆಯಲ್ಲಿ ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ ಕಾರ್ಯಕರ್ತರು ವಿವಿಧ ಸಮಾಜ ಸೇವೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

- Advertisement -

ಅದು ಕೋರೋನ ಮೃತದೇಹಗಳ ಅಂತ್ಯಸಂಸ್ಕಾರವನ್ನು  ಅವರವರ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡುವುದಾಗಲಿ, ಆಂಬ್ಯುಲೆನ್ಸ್ ಸರ್ವಿಸ್ ಕೊಡಿಸುವುದಾಗಲೀ ಆಸ್ಪತ್ರೆಯಲ್ಲಿ ಬೆಡ್ ಕೊಡಿಸುವುದಾಗಲೀ, ತಯಾರಿಸಿದ ಆಹಾರವನ್ನು ಹಾಗೂ ರೇಶನ್ ಕಿಟ್ ಗಳನ್ನು ನೀಡುವುದಾಗಲಿ, ಹೀಗೆ ಎಲ್ಲಾ ಕಾರ್ಯಗಳಲ್ಲೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಈ ಕೊರೋನ  ಎರಡನೇ ಅಲೆ ಸಂದರ್ಭದಲ್ಲಿ ಉಂಟಾಗಿರುವ ರಕ್ತದ ಅಭಾವವನ್ನು ನೀಗಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಹಗಲು ರಾತ್ರಿ ಎನ್ನದೆ ತಮಗೆ ಕರೆ ಬಂದ ಸಮಯದಲ್ಲಿ ಆಸ್ಪತ್ರೆಗೆ ಧಾವಿಸಿ ಯಾರಿಗೆ ರಕ್ತದ ಅವಶ್ಯಕತೆ ಇದೆಯೋ ಅವರಿಗೆ ತಮ್ಮ ರಕ್ತವನ್ನು ಸಹ ಕೊಡುತ್ತಿದ್ದಾರೆ.

ಅದೇ ರೀತಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ದಿನಾಂಕ 26/05/2021 ಬುಧವಾರ 29/05/2021 ರವಿವಾರ  30/05/2021 ಶನಿವಾರ ಹಾಗೂ  4/06/2021 ಶುಕ್ರವಾರದಂದು  ಎಮರ್ಜೆನ್ಸಿ ಯಲ್ಲಿರುವ ಪೇಷೆಂಟ್ ಗಳಿಗೆ ‍‌ಖಾಸಿಮ್ ರಬ್ಬಾನಿ ಅವರ ನೇತೃತ್ವದಲ್ಲಿ 9 ಯೂನಿಟ್ ರಕ್ತವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ರಕ್ತದಾನವನ್ನು ಮಾಡಿರುತ್ತಾರೆ. ಕಾರ್ಯಕರ್ತರ ಈ ಕಾರ್ಯವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.



Join Whatsapp