ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿ ವತಿಯಿಂದ ರಕ್ತದಾನ ಕಾರ್ಯಕ್ರಮ

Prasthutha|

ಬೋಳಿಯಾರ್: ಎಸ್’ಡಿಪಿಐ ಬೋಳಿಯಾರ್ ಗ್ರಾಮ ಸಮಿತಿ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಇದರ ಸಹಭಾಗಿತ್ವದಲ್ಲಿ ರಕ್ತಕೊಟ್ಟು ಬಾಂಧವ್ಯ ಕಟ್ಟು ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ರಕ್ತದಾನ ಶಿಬಿರವು ಇಂದು ಬೋಳಿಯಾರ್ ಸ್ವಾಗತ್ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷರಾದ ಅಶ್ರಫ್ ಮೋನು ಅವರ ನೇತೃತ್ವದಲ್ಲಿ ನಡೆಯಿತು.

- Advertisement -


ಕಾರ್ಯಕ್ರಮವನ್ನು ಸ್ಥಳಿಯ ವಿದ್ವಾಂಸರಾದ ಅಝೀಝ್ ಮುಸ್ಲಿಯಾರ್ ಪ್ರಾರ್ಥನೆಯೊಂದಿಗೆ ಉದ್ಘಾಟಿಸಿದರು. ಸಂತ ತೋಮಾಸ್ ಚರ್ಚ್ ಚೇಲೂರು ಇದರ ಪಾಲನಾ ಮಂಡಳಿ ಉಪಾಧ್ಯಕ್ಷ ರಾಬರ್ಟ್ ಡಿಸೋಜ ರಕ್ತದಾನ ಮಾಡುವ ಮೂಲಕ ರಕ್ತದಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಎಸ್.ಡಿ.ಪಿ.ಐ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸುತ್ತ ಈ ಬಾರಿ ಉಳ್ಳಾಲ ವಿಧಾನಸಭಾ ಕ್ಷೇತ್ರಕ್ಕೆ ಎಸ್.ಡಿ.ಪಿ.ಐ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.


ಕಣಚೂರು ಬ್ಲಡ್ ಬ್ಯಾಂಕ್ ಉಸ್ತುವಾರಿಗಳಾದ ಡಾ. ಉದಯ ಕುಮಾರ್ ಹಾಗೂ ಮುರ್ಶಿದಾ ರಕ್ತದಾನದ ಮಹತ್ವದ ಕುರಿತು ದಾನಿಗಳಿಗೆ ಪ್ರಮುಖ ಮಾಹಿತಿಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಜ.ರಿಯಾಝ್ ಫರಂಗಿಪೇಟೆ ರಕ್ತಕ್ಕೆ ಯಾವುದೇ ಧರ್ಮ ಇಲ್ಲ ರಕ್ತಕ್ಕೆ ಇರುವುದು ಒಂದೇ ಬಣ್ಣ ಒಬ್ಬರ ಜೀವ ಉಳಿಸಲು ರಕ್ತವು ಶ್ರೇಷ್ಠ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು , ಉಳ್ಳಾಲ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ, ರಾಜ್ಯ ಸಮಿತಿ ಸದಸ್ಯರಾದ ನವಾಝ್ ಉಳ್ಳಾಲ ಮೊಹಿದ್ದೀನ್ ಜುಮ್ಮಾ ಮಸೀದಿ ಬೋಳಿಯಾರ್ ಇದರ ಅಧ್ಯಕ್ಷರಾದ ಶರೀಫ್ ಕಾಫಿಕಾಡ್, ಪ್ರಧಾನ ಕಾರ್ಯದರ್ಶಿ ಯೂಸೂಫ್ ಎಮ್ .ಎಸ್, ಮಾಜಿ ಅಧ್ಯಕ್ಷರಾದ ಬಿ.ಎಮ್ ಹನೀಫ್, ಮದರ್ ಇಂಡಿಯಾ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ಫಾರೂಕ್ ಬದ್ರಿಯಾ ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಬೋಳಿಯಾರ್ ಎಸ್.ಡಿ.ಪಿ.ಐ ಉಳ್ಳಾಲ ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ, ಅಶ್ರಫ್ ಮಂಚಿ, ಎಸ್.ಡಿ.ಪಿ.ಐ ಉಳ್ಳಾಲ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಆರೀಫ್ ಕಾಫಿಕಾಡ್ , ಕೋಣಾಜೆ ಬ್ಲಾಕ್ ಅಧ್ಯಕ್ಷರಾದ ಕಮರ್ ಮಲಾರ್ ಉಪಾಧ್ಯಕ್ಷರಾದ ಶರೀಫ್ ರಂತಡ್ಕ ಎಸ್.ಡಿ.ಪಿ.ಐ ಮುಖಂಡರಾದ ರಹಿಮಾನ್ ಬೋಳಿಯಾರ್, ಅಝೀಝ್ ಮದಕ, ಎಸ್.ಡಿ.ಪಿ.ಐ ಬೋಳಿಯಾರ್ ಗ್ರಾಮ ಸಮಿತಿ ಉಪಾಧ್ಯಕ್ಷರಾದ ಸವಾದ್ ರಂತಡ್ಕ ಕಾರ್ಯದರ್ಶಿ ಶಬೀರ್ ಅಮ್ಮೆಂಬಳ, ಇಕ್ಬಾಲ್ ಬಿ.ಎಚ್. ಕಬೀರ್ ರಂತಡ್ಕ ಉಪಸ್ಥಿತರಿದ್ದರು.

- Advertisement -

ಯಶಸ್ವಿ ರಕ್ತದಾನ ಶಿಬಿರದಲ್ಲಿ 56 ಮಂದಿ ಜನಸ್ನೇಹಿ ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಈ ಸಂಧರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ನಳಿಕೆದ ಗುಡ್ಡೆ ತನ್ನ ಜೀವನದ ಮೊದಲ ರಕ್ತದಾನ ಮಾಡುವುದರ ಮೂಲಕ ಖುಷಿ ಪಟ್ಟರು. ಕಾರ್ಯಕ್ರಮವನ್ನು ಇರ್ಫಾನ್ ರಂತಡ್ಕ ನಿರೂಪಿಸಿದರು. ಶರ್ವನ್ ಬೋಳಿಯಾರ್ ಸ್ವಾಗತಿಸಿದರು.

Join Whatsapp