ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಕ್ಷಿಣ ಕನ್ನಡ ಜಿಲ್ಲಾದ್ಯಂತ ಒಂದು ತಿಂಗಳುಗಳ ಕಾಲ ‘ರಕ್ತ ಕೊಟ್ಟು ಬಾಂಧವ್ಯ ಕಟ್ಟು’ ಎಂಬ ಘೋಷಣೆಯೊಂದಿಗೆ ನಡೆಯುವ ರಕ್ತದಾನ ಮಾಸಾಚರಣೆಯ ಅಭಿಯಾನವು ಇಂದು ಅದಿಕೃತವಾಗಿ ಚಾಲನೆಯಾಗಿದೆ.
SDPI ಬಂಟ್ವಾಳ ಪುರಸಭಾ ಸಮಿತಿ ಮತ್ತು ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಸಹಯೋಗದಲ್ಲಿ ಬಿ ಸಿ ರೋಡಿನ ಕೈಕಂಬದ ಕಛೇರಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 72 ಯುನಿಟ್ ರಕ್ತ ಸಂಗ್ರಹ ಆಗಿದೆ. ಅದೇರೀತಿ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮ ಸಮಿತಿ ಮತ್ತು ಯೆನಪೋಯ ಮೆಡಿಕಲ್ ಕಾಲೇಜಿನ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 52 ಯೂನಿಟ್ ರಕ್ತ ಸಂಗ್ರಹವಾಗಿದೆ.
ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬ್ಲಡ್ ಬ್ಯಾಂಕ್ ಗಳಲ್ಲಿ ಇತ್ತೀಚೆಗೆ ರಕ್ತದ ಅಭಾವ ತಲೆದೋರಿದೆ. ಇದನ್ನು ಮನಗಂಡು ಪಕ್ಷದ ವತಿಯಿಂದ ಒಂದು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ಸಂಗ್ರಹಣೆ ಮಾಡುವ ಗುರಿ ಹೊಂದಲಾಗಿದೆ . ಇದಕ್ಕೆ ಎಲ್ಲಾ ಸಾರ್ವಜನಿಕರು ನಮ್ಮ ವಿನಂತಿ ಮೇರೆಗೆ ಪಕ್ಷ , ಜಾತಿ ,ಮತ ಬೇದ ಮರೆತು ಸ್ವಯಂಪ್ರೇರಿತ ರಕ್ತದಾನಕ್ಕೆ ನೊಂದಣಿ ಮಾಡುತ್ತಿದ್ದಾರೆ . ಮುಂದಿನ ದಿನಗಳಲ್ಲಿ ಗ್ರಾಮ, ವಾರ್ಡ್ ಮಟ್ಟದಲ್ಲಿ ಶಿಬಿರವು ನಡೆಯಲಿದೆ ಎಂದು ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಸುಹೈಲ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.