ದೋಹ ಕತಾರ್ ನಲ್ಲಿ ಬೃಹತ್ ರಕ್ತದಾನ ಶಿಬಿರ | ಭಾರೀ ಮೆಚ್ಚುಗೆ

Prasthutha|

ದೋಹ : ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF), ಮಂಗಳೂರು ಬ್ಲಡ್ ಡೋನರ್ಸ್ ಮತ್ತು ವಾರಿಯರ್ಸ್ ಸ್ಪೋರ್ಟ್ಸ್ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ, ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದೊಂದಿಗೆ ಶುಕ್ರವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

- Advertisement -

ಶಿಬಿರವನ್ನು ಉದ್ಘಾಟಿಸಿದ ಮುಖ್ಯ ಅತಿಥಿ, ಇಂಡಿಯನ್ ಕಮ್ಯುನಿಟಿ ಬೆನೆವೋಲೆಂಟ್ ಫೋರಂ (ICBF) ಅಧ್ಯಕ್ಷರಾದ ಪಿ.ಎನ್. ಬಾಬುರಾಜನ್ ಮಾತನಾಡಿ, ಸಾಮಾಜಿಕ ಸೇವೆಗಾಗಿ QISF ಪ್ರಾರಂಭದಿಂದಲೂ ಚಿರಪರಿಚಿತವಾಗಿದೆ ಎಂದರು. ಈ ಬೃಹತ್ ಶಿಬಿರವನ್ನು ಆಯೋಜಿಸಲು ಒಗ್ಗಟ್ಟಾಗಿ ಪರಿಶ್ರಮಿಸಿದ ಎಲ್ಲರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇನ್ನು ಮುಂದೆಯೂ ಯಾವುದೇ ಸಾಮಾಜಿಕ ಕಾರ್ಯಗಳಿಗೆ ತಮ್ಮ ಸಹಾಯ ಮತ್ತು ಸಹಕಾರ ವಿರುವುದಾಗಿ ಹೇಳಿದರು.

QISF ಕೇಂದ್ರ ಸಮೀತಿಯ ಅಧ್ಯಕ್ಷರಾದ ಸಯೀದ್ ಕೋಮಾಚಿಯವರು, QISF ನ ಕಾರ್ಯಕ್ರಮಗಳ ಬಗ್ಗೆ ಬೆಳಕನ್ನು ಚೆಲ್ಲಿ, ಅನಿವಾಸಿ ಭಾರತೀಯರ ನಡುವೆ ಕಾರ್ಯಾಚರಿಸುತ್ತಿರುವ QISF ಸಮಾಜದ ಏಳಿಗೆಗಾಗಿ ಶ್ರಮಿಸಲು, ಸಮಾಜ ಸೇವೆಯನ್ನು ಮಾಡಲು ಎಂದೆಂದಿಗೂ ತಯಾರಾಗಿದೆ. ಕೇವಲ ಮಾತುಗಳಿಂದಲ್ಲ, ಕಾರ್ಯಗಳಿಂದ ಕೂಡ ಮಾಡಿ ತೋರಿಸಿದೆ ಎಂದು ಹೇಳಿದರು.

- Advertisement -

ರಾದತ್ ಅಲ್ ಖೈರ್ ನ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಸರಾಂತ ವೈದ್ಯರಾದ ಚಿರಪರಿಚಿತ ಡಾಕ್ಟರ್ ಅಮಿತ್ ವರ್ಮಾ ತಾವೇ ಸ್ವತಃ ಮೊದಲಿಗರಾಗಿ ರಕ್ತದಾನ ಮಾಡಿ ರಕ್ತದಾನಿಗಳಿಗೆ ಹುರಿದುಂಬಿಸಿದರು.

ಒಂದು ರಕ್ತದಾನದಿಂದ ಮೂರು ಜೀವಗಳನ್ನು ಉಳಿಸಬಹುದು, ಏಕೆಂದರೆ ದಾನಿಯ ರಕ್ತವು, ಕೆಂಪು ರಕ್ತಕಣಗಳು, ಪ್ಲೇಟ್ ಲೇಟ್ಸ್ ಮತ್ತು ಪ್ಲಾಸ್ಮಾ ಎಂಬ ಮೂರು ಭಾಗಗಳಲ್ಲಿ ವಿಂಗಡಿಸಿ ಉಪಯೋಗಿಸಲಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬರೂ ಆಗಿಂದ್ದಾಗೆ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ರಕ್ತದಾನ ಮಾಡಲು, ಒಂದು ನಯಾ ಪೈಸೆಯ ಅಗತ್ಯ ಕೂಡ ಇಲ್ಲ ಎಂಬುದಾಗಿ ಹೇಳಿದರು.

ವಾರಿಯರ್ಸ್ ಸ್ಪೋರ್ಟ್ಸ್ ಸೆಂಟರ್ ಮತ್ತು ವಾರಿಯರ್ಸ್ ಸ್ಪೋರ್ಟ್ಸ್ ಟ್ರೇಡಿಂಗ್ ನ ವ್ಯವಸ್ಥಾಪಕ ನಿರ್ದೇಶಕರಾದ ಕುಶಾಲ್ ಕುಮಾರ್ ರವರು ರಕ್ತದಾನಿಗಳಿಗೆ ಪ್ರೇರಣೆ ನೀಡಿ, QISF, ಬ್ಲಡ್ ಡೋನರ್ಸ್ ಮಂಗಳೂರು ಮತ್ತು ವಾರಿಯರ್ಸ್ ಸ್ಪೋರ್ಟ್ಸ್ ಸೆಂಟರ್ ನ ಸಹಭಾಗಿತ್ವವನ್ನು ಪ್ರಶಂಸಿಸಿದರು.

ಕರ್ನಾಟಕ ಮುಸ್ಲಿಂ ಸಾಂಸ್ಕೃತಿಕ ಸಂಘದ (KMCA) ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸಲಹೆಗಾರರಾದ ಸಾಖಿಬ್

ರಜಾ಼ ಖಾನ್ ರವರು ಮಾತನಾಡಿ, QISF ಯಾವಾಗಲೂ ನಿರಂತರ, ನಿಸ್ವಾರ್ಥ ಸೇವೆಯನ್ನು ಮಾಡುತ್ತಾ, ಅನಿವಾಸಿ ಭಾರತೀಯರ ಕಾನೂನಾತ್ಮಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸದಾ ಮುಂಚೂಣಿಯಲ್ಲಿದೆ. ಇದೇ ರೀತಿ ಎಲ್ಲರೂ ಆತ್ಮಸಂಬಂಧವನ್ನು ಬೆಳೆಸಿಕೊಂಡು, ಸಮುದಾಯದ ಏಳಿಗೆಗಾಗಿ ಆದಷ್ಟು ಶ್ರಮವಹಿಸಬೇಕೆಂದು ಕರೆ ಕೊಟ್ಟರು.

ವಾರಿಯರ್ಸ್ ಸ್ಪೋರ್ಟ್ಸ್ ಸೆಂಟರ್ ಮತ್ತು ವಾರಿಯರ್ಸ್ ಸ್ಪೋರ್ಟ್ಸ್ ಟ್ರೇಡಿಂಗ್ ನ ವ್ಯವಸ್ಥಾಪಕ ಪಾಲುದಾರರಾದ ಮೊಹಮ್ಮದ್ ಇಬ್ರಾಹಿಂರವರು  ಮಾತನಾಡುತ್ತಾ, ಪ್ರತಿಯೊಬ್ಬರೂ ಮಾನವೀಯ ಸೇವೆಯಾದ ರಕ್ತದಾನವನ್ನು ಮಾಡಲು ಮುಂದಾಗಬೇಕೆಂದು ಹೇಳಿದರು.

177 ಮಂದಿ ನೋಂದಾಯಿಸಿದ್ದ ಈ ರಕ್ತದಾನ ಶಿಬಿರದಲ್ಲಿ, 145 ಮಂದಿ ಯಶಸ್ವಿಯಾಗಿ ರಕ್ತದಾನ ಮಾಡಿದರು. QISF ಕರ್ನಾಟಕ ರಾಜ್ಯಾಧ್ಯಕ್ಷರಾದ ನಜೀ಼ರ್ ಪಾಷ ರವರು ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದರು.

QISF ಕೇಂದ್ರ ಸಮೀತಿಯ ಮುಖ್ಯ ಕಾರ್ಯದರ್ಶಿ ಬಷೀರ್ ಅಹ್ಮದ್, QISF ರಾಜ್ಯ ಮತ್ತು ಶಾಖೆಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳಾದ ಲತೀಫ್ ಮಡಿಕೇರಿ, ಝಕರಿಯಾ ಪಾಂಡೇಶ್ವರ, ಇರ್ಷಾದ್ ಕುಳಾಯಿ, ನಯೀಮ್ ಬೆಳಪು, ಖಾಲಿದ್ ಬೆಳಪು, ನೌಫಾಲ್ ಪುತ್ತೂರ್, ಅನ್ವರ್ ಅಂಗರಗುಂಡಿ, ರಿಜ್ವಾನ್ ಕಲ್ಲಡ್ಕ, ರಫೀಕ್ ಉಪ್ಪಿನಂಗಡಿ, ನವೀಜ಼್, ಅನ್ವರ್ ಬೋಲ್ಯಾರ್, ಖಲಂದರ್ ಶಹಾ, ಜುನೈದ್, ಶಬ್ಬೀರ್, ಶಾವಾಜ್, ತಫ್ಸೀರ್ ಮತ್ತಿತರರು ಕಾರ್ಯಕ್ರಮದುದ್ದಕ್ಕೂ ಉಪಸ್ಥಿತರಿದ್ದರು.

ಬ್ಲಡ್ ಡೋನರ್ಸ್ ಮಂಗಳೂರು ಮತ್ತು ವಾರಿಯರ್ಸ್ ಸ್ಪೋರ್ಟ್ಸ್ ಸೆಂಟರ್ ನ ಇಂತಿಯಾಜ಼್, ಮುನವ್ವರ್, ಮೊಹಮ್ಮದ್ ಇಫಾಜ಼್, ಖೈಸರ್ ಹಾಗೂ ಮತ್ತಿತರರು ಸಹ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿ, ಸಹಾಯ ಮಾಡಿದರು. QISF ಹಾಗೂ KMCA ಉಪಾಧ್ಯಕ್ಷರಾದ ಜಿ಼ಯಾಉಲ್ ಹಖ್ ಧನ್ಯವಾದ ಸಮರ್ಪಿಸಿದರು.   

Join Whatsapp