ಬೆತ್ತಲೆ ವೀಡಿಯೋ ಪಡೆದು ಬ್ಲಾಕ್​ಮೇಲ್| ಯುವ ವೈದ್ಯ ಆತ್ಮಹತ್ಯೆ; ಆರೋಪಿ ಸೆರೆ

Prasthutha|

ಬೆಂಗಳೂರು: ಡೇಟಿಂಗ್​ ಆ್ಯಪ್​ನಲ್ಲಿ ನಕಲಿ ಖಾತೆ ತೆರೆದು ಮಾಡಿದ ಬ್ಲಾಕ್​ಮೇಲ್​ನಿಂದಾಗಿ ಕೆಂಗೇರಿ ಹೆಜ್ಜಾಲದ ಮಾರ್ಗದ ರೈಲಿಗೆ ತಲೆಕೊಟ್ಟು ಯುವ ವೈದ್ಯ ಆತ್ಮಹತ್ಯೆ ಮಾಡಿಕೊಂಡಿರುವುದು ರೈಲ್ವೆ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

- Advertisement -

ಪ್ರಕರಣ ಸಂಬಂಧ ಭೋಪಾಲ್ ಮೂಲದ ಆರೋಪಿಯೊಬ್ಬನನ್ನು ಬಂಧಿಸಿ‌ ವಿಚಾರಣೆ ನಡೆಸಲಾಗಿದೆ ಎಂದು ರೈಲ್ವೆ ಎಸ್ ಪಿ ಸಿರಿಗೌರಿ ತಿಳಿಸಿದ್ದಾರೆ.

ಡೇಟಿಂಗ್​ ಆ್ಯಪ್​ನಲ್ಲಿ ನಕಲಿ ಖಾತೆ ತೆರೆದು ವೈದ್ಯನ ಸಂಪರ್ಕ ಬೆಳೆಸಿದ್ದ ಬಂಧಿತ ಆರೋಪಿ ಹಾಗೂ ಆತನ ಗ್ಯಾಂಗ್​, ಬಳಿಕ ವೈದ್ಯನ ಬೆತ್ತಲು ವಿಡಿಯೋ ಪಡೆದು ಬ್ಲಾಕ್​ಮೇಲ್​ ಮಾಡಲು ಆರಂಭಿಸಿತ್ತು.

- Advertisement -

ವೈದ್ಯನಿಗೆ ಬ್ಲಾಕ್​ಮೇಲ್​ ಮಾಡಿ 70 ಸಾವಿರ ಹಣ ಪಡೆದಿದ್ದ ಗ್ಯಾಂಗ್, ಮತ್ತಷ್ಟು ಹಣಕ್ಕಾಗಿ ಬೇಡಿಕೆಯಿಟ್ಟಿತ್ತು.ಇದರಿಂದ ಬೇಸತ್ತ ವೈದ್ಯ ಕಳೆದ ವರ್ಷದ ಆ.31ರಂದು ಕೆಂಗೇರಿ ಹೆಜ್ಜಾಲದ ಮಾರ್ಗದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದರು.

ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು  ಭೋಪಾಲ್ ಮೂಲದ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.



Join Whatsapp