ಬೆಂಗಳೂರು: ಕನ್ನಡ ಪರ ಹೋರಾಟಗಾರರ ಮೇಲಿನ ಕೇಸನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕನ್ನಡದಲ್ಲಿ ಫಲಕ ಇರಬೇಕು ಎಂಬುದು ಸತ್ಯವೇ. ಕಾನೂನು ಕೈಗೆತ್ತಿಕೊಳ್ಳದೇ ಫಲಕಗಳನ್ನು ಬದಲಾಯಿಸಿ. ನಿಧಾನವಾಗಿ ಎಲ್ಲವೂ ಸರಿ ಹೋಗುತ್ತದೆ. ಕನ್ನಡ ಹೋರಾಟಗಾರರ ಮೇಲೆ, ನಮ್ಮ ಮೇಲೂ ಬಹಳಷ್ಟು ಕೇಸ್‌ಗಳೂ ಬಾಕಿ ಇವೆ. ನೆಲ, ಜಲ ಭಾಷೆಯ ವಿಚಾರದಲ್ಲಿ ಹೋರಾಟ ಮಾಡಿದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ನಾನೂ ಕೂಡ ಗೃಹ ಸಚಿವರಲ್ಲಿ ಮನವಿ ಮಾಡುತ್ತೇನೆ ಎಂದರು.