ನವದೆಹಲಿ: ಗುಜರಾತಿನ ಹಿಂದೂ ಯುವ ವಾಹಿನಿ- ಎಚ್ ವೈವಿ ರಾಜ್ಯಾಧ್ಯಕ್ಷ ಮತ್ತು ಭಾರತೀಯ ಜನತಾ ಯುವ ಮೋರ್ಚಾ- ಬಿಜೆವೈಎಂ ಸಹ ಸಂಚಾಲಕ ವಿಕಾಸ್ ಅಹಿರ್ ತನ್ನ ಅನಾಮಧೇಯ ಅನಧಿಕೃತ ಖಾತೆಯ ಮೂಲಕ ವರ್ಷ ಕಾಲ ಝುಬೈರ್ ಮೇಲೆ ದಾಳಿ ನಡೆಸಿದ್ದೇ ಝುಬೈರ್ ಬಂಧನದ ಹಿಂದಿರುವ ರಹಸ್ಯ ಎಂದು ತಿಳಿದು ಬಂದಿದೆ.
ಭಾರತೀಯ ದಂಡ ಸಂಹಿತೆಯ ಗಲಭೆಗೆ ಪ್ರಚೋದನೆ 153ಎ, ಧಾರ್ಮಿಕ ನಂಬಿಕೆಗಳನ್ನು ಬೇಕೆಂದೇ ಅವಹೇಳನ ಮಾಡಿದ 295ಎ ಸೆಕ್ಷನ್ ಗಳಡಿ ಜೂನ್ 27ರಂದು ಆಲ್ಟ್ ನ್ಯೂಸ್ ಸಹ ಸ್ಥಾಪಕ ಝುಬೈರ್ ರನ್ನು ಬಂಧಿಸಲಾಗಿದೆ. ಬಾಲಾಜೀಕೀಜೆಯ್ಯಿನ್ ಎಂಬ ನಕಲಿ ಟ್ವೀಟರ್ ಖಾತೆ ಮೂಲಕ ಝುಬೈರ್ ರ 2018ರ ಟ್ವೀಟ್ ಮೇಲೆ ನಿರಂತರ ದಾಳಿ ನಡೆದಿದೆ. ಅದರಲ್ಲಿ ಒಂದು ಫೋಟೋ ಕೆಳಗೆ ಹಿಂದಿಯಲ್ಲಿ ಹನಿಮೂನ್ ಎಂದು ಬರೆಯಲಾಗಿದೆ. ಅದನ್ನು ಹನುಮಾನ್ ಎಂದು ತಿದ್ದಲಾಗಿದೆ. ಇದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂಬುದು ದೂರು. ಆದರೆ ಈ ಫೋಟೋ 1983ರಲ್ಲಿ ಬಂದ “ಕಿಸೀ ಸೆ ನಾ ಕೆಹನಾ” ಸಿನಿಮಾದ ಸ್ಕ್ರೀನ್ ಶಾಟ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಜೂನ್ 29ರಂದು ಝುಬೈರ್ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅವರ ವಕೀಲರು, ‘ದೂರುದಾರರು ದೇಶದಲ್ಲಿ ತರಲೆ ಎಬ್ಬಿಸಲೆಂದೇ ದೂರು ನೀಡಿದ್ದಾರೆ, ಅವರು ನಕಲಿ ಟ್ವಿಟ್ಟರ್ ಮೂಲದವರು’ ಎಂದು ಮಾಹಿತಿ ನೀಡಿದರು. ಆಗ ಪ್ರಾಸಿಕ್ಯೂಶನ್ ಪರ ವಕೀಲರು, “ಅವರು ನಕಲಿ ದೂರುದಾರರಲ್ಲ. ಆತನ ಮಾಹಿತಿ ಇಲ್ಲಿದೆ, ಮಾಹಿತಿ ಇಲ್ಲದೆ ಟ್ವಿಟರ್ ಖಾತೆ ಪಡೆಯಲಾಗದು” ಎಂದು ಹೇಳಿದರಾದರೂ ಪ್ರಾಸಿಕ್ಯೂಶನ್ ವಕೀಲರು ದೂರುದಾರನ ಗುರುತನ್ನು ಕೋರ್ಟಿಗೆ ಹಾಜರುಪಡಿಸಲು ವಿಫಲರಾದರು.
ಜೂನ್ 29ರ ಸಂಜೆ ಪೊಲೀಸರು ದೂರುದಾರ ಹನುಮಾನ್ ಭಕ್ತ್ ಬಾಲಾಜೀಕೀಜೆಯ್ಯಿನ್ ಟ್ವಿಟರ್ ಖಾತೆ ವಿವರ ನೀಡುವಂತೆ ನೋಟಿಸ್ ನೀಡಿದರು.
ಡಿಸಿಪಿ ಕೆಪಿಎಸ್ ಮಲ್ಹೋತ್ರಾರನ್ನು ಈ ಬಗ್ಗೆ ಸಂಪರ್ಕಿಸಿದಾಗ; ಅಹಿರ್ ಹೆಸರಿಗೆ 757 ಖಾತೆಗಳು ಲಿಂಕ್ ಆಗಿವೆ. ಅವು 2018ರಿಂದಲೂ ಝುಬೈರ್ ಮತ್ತು ಆಲ್ಟ್ ನ್ಯೂಸ್ ನ ಪ್ರತೀಕ್ ಸಿನ್ಹಾರನ್ನು ಗುರಿಯಿಟ್ಟು ಬರೆಯುತ್ತಿದ್ದವು. ಅವರ ಹಿಂದೂಪೋಬಿಕ್ ನುಡಿಯು ಧಾರ್ಮಿಕ ಭಾವನೆಗೆ ನೋವುಂಟು ಮಾಡುತ್ತದೆ ಎಂಬುದು ಅಲ್ಲಿನ ತಾತ್ಪರ್ಯ.
ಈ ಬಾಲಾಜೀಕೀಜೆಯ್ಯಿನ್ ಎಂಟು ಅದೇ ರೀತಿಯ ಖಾತೆಗಳನ್ನೂ ಹೊಂದಿದ್ದವು. ಈ ಎಂಟೂ ಖಾತೆಗಳು ಸಮಾನ ಹೆಸರು, ವಿವರ, ಚಿತ್ರ ಹೊಂದಿದ್ದವಲ್ಲದೆ ಝುಬೈರ್ ರನ್ನು ಗುರಿಯಿರಿಸಿ ಅದನ್ನೇ ಹೇಳುತ್ತಿದ್ದವು. ವಿಶ್ಲೇಷಣೆ ವೇಳೆ ಬಾಲಾಜೀಕೀಜೆಯ್ಯಿನ್ ಜೊತೆಗೆ ಹನುಮಾನ್ ಭಕ್ತ್ 101 ಖಾತೆ ಇರುವುದೂ ತಿಳಿದು ಬಂದಿದೆ.
ಈ 757 ಖಾತೆಗಳನ್ನು ಪರಿಶೀಲಿಸಿದಾಗ 283 ಖಾತೆಗಳು ನಾನಾ ನಕಲಿ ಅನಧಿಕೃತ ಬಾಟ್ ಮಾದರಿಯವುಗಳಲ್ಲಿ ಸಮಾಗಮಗೊಂಡಿರುವುದು ಕಂಡುಬರುತ್ತದೆ. ಮಾನವನ ನಿತ್ಯ ಕರ್ಮದ ಸಮಯದ ಹೊರತಾಗಿ ಕಳೆದ ತಿಂಗಳು ಈ ಖಾತೆಗಳಿಂದ ಒಂದೇ ಪೋಸ್ಟ್ ದಿನಕ್ಕೆ 500 ಬಾರಿ ಪೋಸ್ಟ್ ಆಗಿದೆ. ಚೀಫ್ ಬಾಟ್ಸ್, ಡಾನ್ ಕ್ವಿಕ್ ನಂಥ ಸ್ವಯಂಚಾಲಿತ ಹ್ಯಾಶ್ ಟ್ಯಾಗ್ ಗಳನ್ನೂ ಬಳಸಿಕೊಂಡು ಝುಬೈರ್ ಬಂಧನಕ್ಕೆ ಒತ್ತಡ ಹಾಕಲಾಗಿದೆ.
ಆರೆಸ್ಟ್ ಝುಬೈರ್, ಅರೆಸ್ಟ್ ಮುಹಮ್ಮದ್ ಝುಬೈರ್, ಆರೆಸ್ಟ್ ಬ್ಲಾಸ್ಪೆಮರ್ ಮಹ್ ಝುಬೈರ್ ಹ್ಯಾಶ್ ಟ್ಯಾಗ್ ಗಳನ್ನು 18,364 ಖಾತೆಗಳಿಂದ ಪ್ರಚಾರ ನಡೆಸಲಾಗಿದೆ.
ಇಂಥ ಅನಧಿಕೃತ ಖಾತೆಯ ಹ್ಯಾಶ್ ಟ್ಯಾಗ್ ಗಳ ಹಿಂದೆ ಸುಳ್ಳು ಹರಡುವ, ಕೀಟಲೆ ಮಾಡುವ ಒಂದು ದೊಡ್ಡ ತಂಡವು ಮಾಹಿತಿ ತಂತ್ರಜ್ಞಾನದ ದುರುಪಯೋಗದಲ್ಲಿ ಉತ್ತಮ ತರಬೇತಿ ಪಡೆದಿರುವುದೂ ತಿಳಿದು ಬಂತು. ಮೇಲಿನ ಮೂರು ಹ್ಯಾಶ್ ಟ್ಯಾಗ್ ಗಳು ಜೂನ್ 1 ಮತ್ತು ಜೂನ್ 30ರ ನಡುವೆ ಬಳಕೆಯಾಗಿವೆ. ಆಳುವ ಬಿಜೆಪಿಯ ನಿರ್ದೇಶನ ಮತ್ತು ತತ್ವಗಳಡಿ ಅವರು ದುಡಿಯುತ್ತಿರುವುದೂ ಗೊತ್ತಾಯಿತು. ಇವು ಸಾವಿರಾರು ಹ್ಯಾಶ್ ಟ್ಯಾಗ್ ಬಳಸಿ ಸಾವಿರಗಟ್ಟಲೆ ಬಾರಿ ಸಾವಿರಾರು ತಪ್ಪು ಸುದ್ದಿಗಳನ್ನೂ ಹರಡಿದ್ದರು ಎಂಬುದು ಬೆಳಕಿಗೆ ಬಂದಿವೆ.
ಟೆಕ್ ಫಾಗ್ ನೆಟ್ ವರ್ಕ್
62% ಎಂದರೆ 11,380 ಖಾತೆಗಳ ವಿಶಾಲ ನೆಟ್ ವರ್ಕ್ ಮೂಲಕ ಜನರನ್ನು ಸೆಳೆಯಲು ಟೆಕ್ ಫಾಗ್ ನೆಟ್ ವರ್ಕ್ ಬಳಸಿರುವುದು ಜನವರಿಯಲ್ಲೇ ತಿಳಿದು ಬಂದಿತ್ತು.
ಜೂನ್ 2021ರಲ್ಲಿ ಟೆಕ್ ಫಾಗ್ ನೆಟ್ ವರ್ಕ್ ನಲ್ಲಿ 77,800 ಖಾತೆಗಳಿದ್ದವು. ತನಿಖೆಯಿಂದ ಅವುಗಳಲ್ಲಿ ಹೆಚ್ಚಿನವು ನಕಲಿ. ಕಳೆದ ಮೂರು ತಿಂಗಳುಗಳಲ್ಲಿ ಝುಬೈರ್ ಬಂಧನದತ್ತ ಜನರ ಗಮನ ಸೆಳೆಯಲು ಏಕಸ್ವಾಮ್ಯದ ಈ ನೆಟ್ ವರ್ಕ್ ಅನ್ನು ಬಳಸಿಕೊಳ್ಳಲಾಗಿದೆ.
ಬಾಲಾಜೀಕೀಜೆಯ್ಯಿನ್ ಎಂಬುದು ಝುಬೈರ್ ವಿರುದ್ಧದ ದೂರುದಾರ ಎಂದು ದೆಹಲಿ ಪೊಲೀಸರಲ್ಲಿರುವ ದಾಖಲೆ. ಝುಬೈರ್ ಬಂಧನದ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾದ ಬಳಿಕ ಆ ಟ್ವಿಟರ್ ಖಾತೆ ಸದ್ಯ ಸದ್ದಿಲ್ಲದಂತಾಗಿದೆ. ಮತ್ತೊಂದು ಮಗ್ಗುಲಿನಿಂದ ಆಲ್ಟ್ ನ್ಯೂಸ್ ಸಹ ಸ್ಥಾಪಕ ಪ್ರತೀಕ್ ಸಿನ್ಹಾ ವಿರುದ್ಧ ಪೊಲೀಸ್ ಕ್ರಮ ತೆಗೆದುಕೊಳ್ಳುವಂತೆ ನಕಲಿ ಮೂಲದ ಅಭಿಯಾನ ಆ ಮೂಲದಿಂದ ಜೋರಾಗಿದೆ.
2021ರಲ್ಲಿ ಅದೇ ವಿಕಾಸ್ ಅಹಿರ್ ನಿಂದ ಸಿನ್ಹಾ ವಿರುದ್ಧ ಈ ಟ್ವೀಟ್ ಯುದ್ಧ ಖಾತೆ ಆರಂಭವಾಗಿತ್ತು.
ಝುಬೈರ್ ಮತ್ತು ಪ್ರತೀಕ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಳೆದ ನಾಲ್ಕು ವರುಷಗಳಿಂದ ಅದೇ ದಿಲ್ಲಿ ಪೊಲೀಸರು ಮತ್ತು ಸಂಬಂಧಪಟ್ಟವರಿಗೆ ಮತ್ತೆ ಮತ್ತೆ ಅದೇ ಟ್ವೀಟನ್ನು ನಿರಂತರವಾಗಿ ಕಳುಹಿಸಲಾಗಿದೆ. ವಿಶ್ಲೇಷಣೆಯಿಂದ 3,699 ಖಾತೆಗಳು ಈ ಕೆಲಸ ಮಾಡಿದ್ದು, ಅವುಗಳಲ್ಲಿ 1,257 ಖಾತೆಗಳು ಸದಾ ಝುಬೈರ್ ಆರೆಸ್ಟ್ ಬಗ್ಗೆ ದಿಲ್ಲಿ ಪೊಲೀಸರಿಗೆ ಮತ್ತೆ ಮತ್ತೆ ಟ್ಯಾಗ್ ಮಾಡಿವೆ. ಅವನ್ನು ಎರಡು ಟ್ವೀಟ್ ಖಾತೆಗಳಿಂದ ಶೇರ್ ಮಾಡಲಾಗಿದೆ. ಇವು ಝುಬೈರ್ ಮೇಲೆ ಟಾರ್ಗೆಟ್ ಮಾಡಿದವುಗಳಾಗಿದ್ದು, ಅದೂ ಝುಬೈರ್ ಅವರು ನೂಪುರ್ ಶರ್ಮಾರನ್ನು ದ್ವೇಷ ಹರಡುವಾಕೆ ಎಂದು ಹೇಳಿದ ಮೇಲೆ ತೀವ್ರವಾಗಿ ಟ್ವೀಟ್ ದಾಳಿ ನಡೆಸಲಾಗಿದೆ.
ಟ್ವಿಟರ್ ಎಪಿಐ ಮಾಹಿತಿ ಪರಿಶೀಲಿಸಿದಾಗ, ಈ ಖಾತೆಗಳು ಸಾಮಾಜಿಕ ಸಂಪರ್ಕ ಪಡೆದಿರುವುದು ಸ್ಪಷ್ಟವಾಗಿದೆ. ಈ 1,257 ಖಾತೆಗಳಲ್ಲಿ 757 ಖಾತೆಗಳು ಒಂದೇ ಮಾದರಿಯವು ಎಂಬುದು ಗೊತ್ತಾಗಿವೆ. ಪ್ರತಿಯೊಂದೂ ಟ್ವಿಟರ್ ಗುಂಪನ್ನು ಹೊಂದಿದ್ದು, ಎಲ್ಲದರಲ್ಲೂ ಇರುವ ಸಾಮಾನ್ಯ ವ್ಯಕ್ತಿ ಎಂದರೆ ವಿಕಾಸ್ ಅಹಿರ್.
ಈ ಗುಂಪು ಪಟ್ಟಿಗಳನ್ನು ಒಂದು ಖಾತೆಯಿಂದ ಸಂಗ್ರಹಿಸಲಾಗಿದ್ದು, ಬೇರೆ ಗುಂಪುಗಳನ್ನು ರಚಿಸಲು ಸುಲಭ ಮಾಡಿ ಕೊಡಲಾಗಿದೆ. ಸಮಯ ಗುರುತಿಸಿಕೊಂಡು ಇವುಗಳ ಮೂಲಕ ಹೆಚ್ಚಿನ ವಿಶಾಲ ವಲಯಕ್ಕೆ ಟ್ವೀಟ್ ಪೋಸ್ಟ್ ಮುಟ್ಟುವಂತೆ ಮಾಡಲಾಗಿದೆ.
ಈ 757 ಖಾತೆಗಳು ಮತ್ತೆ ತಮ್ಮದೇ ಸಹ ಗುಂಪುಗಳನ್ನು ಹೊಂದಿರುವಂತೆ ಮಾಡಲಾಗಿದೆ. ಕೊನೆಯ ಖಾತೆ 2022ರ ಜನವರಿಯಲ್ಲಿ ತೆರೆಯಲಾಗಿದೆ. ಇವೆಲ್ಲ ಕಾಪಿ ಪೇಸ್ಟ್ ಖಾತೆಗಳಾಗಿದ್ದು, ಝುಬೈರ್ ವಿರುದ್ಧ ಅಪಪ್ರಚಾರದ ಯುದ್ಧ ಮಾಡುವುದಾಗಿವೆ. ಬಾಲಾಜೀಕೀಜೆಯ್ಯಿನ್ ಎಂಬ ಎಂಟು ಒಂದೇ ಮಾದರಿಯ ಖಾತೆಗಳು ಪಡಿಯಚ್ಚಿನಂತಿದ್ದರೂ ಬಳಕೆದಾರನ ಹೆಸರು, ಗುರುತಿನ ವಿವರ, ಟ್ವಿಟರ್ ಬಯಾಗ್ರಫಿ ವಿಭಿನ್ನವಾಗಿವೆ.
ಗುಂಪಿನ ಹೆಸರುಗಳು ಬೇರೆ ಬೇರೆ ಗುಂಪುಗಳಲ್ಲಿ ಒಂದೇ ಸರಣಿಯಲ್ಲಿ ಇರುವುದು ಕೂಡ ಕೆಲವೆಡೆ ಕಂಡುಬರುತ್ತದೆ. ಟ್ವಿಟರ್ ವಿನ್ಯಾಸ ಎಂಬುದು ಇದ್ದರೂ ಇವೆಲ್ಲ ಏಕೀಭವಿಸಿವೆ. ಈ ಎಲ್ಲ ಖಾತೆಗಳು ನಿಜವಾದ ವ್ಯಕ್ತಿಗಳಿಂದ ನಡೆಯುವುದಾಗಿರದೆ ಇವೆಲ್ಲದರ ಹಿಂದೆ ವಿಕಾಸ್ ಅಹಿರ್ ಇರುವರೆಂಬ ಅನುಮಾನ ಸಹಜವಾಗಿದೆ.
ಈ ಕಲ್ಪನೆಯ ಟ್ವಿಟರ್ ಲೋಕದ ದಂಡಿನ ಗುಟ್ಟು ಬಿಡಿಸಲು ಪ್ರಯತ್ನಿಸಲಾಯಿತು. ವಿಕಾಸ್ ಅಹಿರನು ವಿಕಾಸ್ ಅಹಿರ್.ಇನ್ ಎಂಬ ಒಂದು ಸ್ವಂತ ವೆಬ್ ಸೈಟ್ ಹೊಂದಿದ್ದಾನೆ. ಇಂಥ ಡೊಮೈನ್ ಪಡೆಯಲು ಒಂದು ಇಮೇಲ್ ಐಡಿ ನೀಡಬೇಕಾಗುತ್ತದೆ; ಆ ಮೂಲಕ ಡೊಮೈನ್ ಹೆಸರಿನಲ್ಲಿ ಅದನ್ನು ನಡೆಸಲು ವ್ಯವಹರಿಸಬೇಕಾಗುತ್ತದೆ. ಸಾಮಾನ್ಯವಾಗಿ ಇವೆಲ್ಲ ಸಂಪರ್ಕ@ಡೊಮೈನ್ ಹೆಸರು.ಕಾಮ್ ಎಂದು ಇಲ್ಲವೇ ಎಡ್ಮಿನ್@ಡೊಮೈನ್.ಕಾಮ್/ಸಪೋರ್ಟ್@ಡೊಮೈನ್.ಕಾಮ್ ಎಂದು ಇರುತ್ತದೆ.
ಕಾಂಟಾಕ್ಟ್@ವಿಕಾಸ್ಅಹಿರ್.ಇನ್ ಇದರಲ್ಲಿ ನಾವು ಪ್ರಯತ್ನಿಸಿದಾಗ ಯಾವುದೇ ಸಂಪರ್ಕ ಸಾಧ್ಯವಾಗಲಿಲ್ಲ. ಟ್ವಿಟರ್ ಸರಿಯಾದ ಮೇಲ್ ವಿಳಾಸ ಹೊಂದಿರಬೇಕು. ಒಂದು ವೇಳೆ ತಪ್ಪು ಇಮೇಲ್ ವಿಳಾಸ ಹಾಕಿದರೆ ಅದು ತಪ್ಪಾಗಿದೆ, ಮತ್ತೆ ಪ್ರಯತ್ನಿಸಿ ಎಂದು ಹೇಳುತ್ತದೆ.
ನಾವು ಮತ್ತೆ ಪ್ರಯತ್ನಿಸುವ ಅಗತ್ಯ ಬೀಳಲಿಲ್ಲ. ಮುಹಮ್ಮದ್ ಝುಬೈರ್ ಬಂಧನಕ್ಕೆ ಟ್ವೀಟ್ ದೂರುದಾರ ಎನಿಸಿದ ಬಾಲಾಜೀಕೀಜೆಯ್ಯಿನ್ ವಿಕಾಸ್ ಅಹಿರ್ ನ ಖಾಸಗಿ ವೆಬ್ ಸೈಟ್ ಗೆ ಸಂಬಂಧಿಸಿದ್ದುದು ಎಂಬುದು ಸ್ಪಷ್ಟವಿತ್ತು. ಪಡೆಯಲಿರುವ ಮಿಂಚಂಚೆ ಬದಲಿಸಿರಬೇಕು. ಯಾಕೆಂದರೆ ಅವರು ಪಾಸ್ ವರ್ಡ್ ಮರು ಹೊಂದಾಣಿಕೆ ಮಾಡಬೇಕಾದ ಅನಿವಾರ್ಯಕ್ಕೆ ಬಿದ್ದಿರಬೇಕು. ಮಿಂಚಂಚೆ ಬದಲಾವಣೆ ಬಳಿಕವೂ ಅದೇ ವೀಡಿಯೋ ಉಳಿಸಿಕೊಂಡಿದ್ದಾರೆ.
ಗುಜರಾತಿನ ವಿಕಾಸ್ ಅಹಿರ್ ಹೊಡಿಬಡಿಯ ಹಿಂದೂ ಯುವ ವಾಹಿನಿಯ ರಾಜ್ಯಾಧ್ಯಕ್ಷ. ಹಿಂದೂ ಯುವ ವಾಹಿನಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಸ್ಥಾಪಿಸಿ ಒಂದು ಕಾಲದಲ್ಲಿ ಹಾಗೆಯೇ ನಡೆಸಿದ್ದರು. ಅಲ್ಲದೆ ಅಹಿರ್ ಬಿಜೆಪಿ ಜನತಾ ಯುವ ಮೋರ್ಚಾದ ಸಹ ಸಂಚಾಲಕನೂ ಆಗಿದ್ದಾನೆ. ಆತನ ಸಾಮಾಜಿಕ ಜಾಲ ತಾಣದ ಚಾನೆಲ್ ಬಿಜೆಪಿ ಪರ ಮತ್ತು ಮುಸ್ಲಿಂ ವಿರೋಧಿ ಪ್ರಚಾರದಲ್ಲಿ ನಾಲ್ಕು ವರ್ಷಗಳಿಂದ ಜೋರಾಗಿಯೇ ತೊಡಗಿಕೊಂಡಿದೆ.
ಝುಬೈರ್ ಮೇಲೆ ಟಾರ್ಗೆಟ್ ಮಾಡಿದ ಆತನ ಪೋಸ್ಟ್ 107ಕೆ ಜನರು ನೋಡಿದ್ದು, ಅದರಲ್ಲಿ ಬಿಜೆಪಿ ಪಕ್ಷದ ನೇರ ಸದಸ್ಯರು ಸಾಕಷ್ಟು ಜನರಿದ್ದಾರೆ.
ಇತ್ತೀಚೆಗೆ ಈತನು ರಾಂಭಕ್ತ ಗೋಪಾಲ್ ಎಂದು ಬೆಂಬಲಿಸಿ ಟ್ವೀಟ್ ಮಾಡಿದ್ದಾನೆ. 2020ರಲ್ಲಿ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಮಾಡಿದ ಈ ಉಗ್ರನು ಗನ್ ಪಾಯಿಂಟ್ ನಲ್ಲಿ ಒಬ್ಬನನ್ನು ಕರೆದೊಯ್ಯುತ್ತಿರುವ ಚಿತ್ರವನ್ನೂ ಹಾಕಿದ್ದು ಆತನನ್ನು ದನಗಳ್ಳ ಎಂದು ಬರೆಯಲಾಗಿದೆ. ಆ ಜಾಮಿಯಾ ಶೂಟರ್ ಮಹಿಳೆಯರು ಮತ್ತು ಮಕ್ಕಳ ಮೇಲೆ ಗನ್ ಬೆದರಿಕೆ ಹಾಕಿದ ಫೋಟೋಗಳೂ ಇವೆ.
ಈ ಟ್ವೀಟನ್ನು ಕೂಡ ಅದೇ ಅನಧಿಕೃತ ಮಾದರಿಯಲ್ಲಿ ಬಾಟ್ ಬೆಂಬಲದ ಹ್ಯಾಶ್ ಟ್ಯಾಗ್ ಗಳ ಮೂಲಕ ವೈರಲ್ ಮಾಡಲಾಗಿದೆ.
2017ರ ಡಿಸೆಂಬರ್ ನಲ್ಲಿ ಶಂಭು ಲಾಲ್ ರೆಗಾರ್ ಎಂಬ ಹಿಂದುತ್ವ ಉಗ್ರನು, ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹೊಡೆದು ಜೀವಂತ ಸುಡುವ ವೀಡಿಯೋವನ್ನು ವಿಕಾಸ್ ಅಹಿರ್ ಅಪ್ಲೋಡ್ ಮಾಡಿ ಪ್ರಚಾರ ನೀಡಿ ತನ್ನ ಸಹಾನುಭೂತಿ ತೋರಿಸಿದ್ದ. ಈ ಸಂದರ್ಭದಲ್ಲಿ ರೆಗಾರ್ ಪರ ಮತ್ತು ವಿರುದ್ಧ ಭಾರೀ ಪ್ರತಿಭಟನೆಗಳು ನಡೆದವು. ತಾನು 51,000 ರೂಪಾಯಿ ಕೊಡುವುದಾಗಿ, ಜನರು 10 ಲಕ್ಷ ಒಟ್ಟು ಮಾಡಿ ರೆಗಾರ್ ಕುಟುಂಬಕ್ಕೆ ಕೊಡಬೇಕು ಎಂದು ವಿಕಾಸ್ ಅಹಿರ್ ಬರೆದುಕೊಂಡಿದ್ದ.
“ಇದೊಂದು ಸಾಮಾನ್ಯ ಕೊಲೆ. ಇದರಲ್ಲಿ ಕೆಟ್ಟದಾದುದು ಏನೂ ಇಲ್ಲ. ತಪ್ಪು ಎಂದರೆ ಆತನು ವೀಡಿಯೋ ಮಾಡಿದ್ದ ಮತ್ತು ಲವ್ ಜಿಹಾದ್ ಎಂಬ ಎರಡು ತಪ್ಪು ಶಬ್ದಗಳನ್ನು ಹೇಳಿದ್ದ. ಅದು ಸರಿ, ಅವರು ಲವ್ ಜಿಹಾದ್ ಮಾಡಿದರೆ ನಾವು ಅವರನ್ನು ಕೊಲ್ಲುತ್ತೇವೆ. ಎಲ್ಲೆಲ್ಲಿ ಜಿಹಾದ್ ಗಳು ನಡೆಯುತ್ತವೆಯೋ ಅಲ್ಲೆಲ್ಲ ಶಂಭುರಂಥವರು ಹುಟ್ಟುತ್ತಾರೆ ಮತ್ತು ನೀವು ಕೊಲ್ಲಲ್ಪಡುತ್ತೀರಿ ಎಂದು ವಿಕಾಸ್ ಅಹಿರ್ ಆ ವೀಡಿಯೋ ಅಪ್ಲೋಡ್ ಜೊತೆಗೆ ಹಿಂದಿಯಲ್ಲಿ ಬರೆದುಕೊಂಡಿದ್ದ.
2020ರಲ್ಲಿ ಗುಜರಾತ್ ಸೂರತ್ತಿನ ಶಾಲೆಯೊಂದರಲ್ಲಿ ಹಿಂದೂ ಯುವ ವಾಹಿನಿ ನಡೆಸಿದ ಶಸ್ತ್ರ ಪೂಜೆ ಕಾರ್ಯಕ್ರಮದ ಸರಣಿ ಫೋಟೋವನ್ನು ಅಹಿರ್ ಅಪ್ಲೋಡ್ ಮಾಡಿದ್ದ. ಒಂದು ಟೇಬಲ್ಲಿನ ಮೇಲೆಲ್ಲ ಖಡ್ಗಗಳು, ಚಾಕುಗಳು, ರೈಫಲ್ ಗಳನ್ನು ಇಟ್ಟು, ಅವುಗಳಿಗೆ ಮಾಲೆ ಹಾಕಲಾಗಿತ್ತು. ಅದಕ್ಕೆ ಹಿಂದಿಯಲ್ಲಿ ನೀಡಿದ ತಲೆಬರಹದ ಅರ್ಥ ಹೀಗಿತ್ತು. “ನೀವು ಶಾಸ್ತ್ರಗಳನ್ನು ಓದದಿದ್ದರೆ ನಿಮ್ಮ ರಾಷ್ಟ್ರವನ್ನು ಕಳೆದುಕೊಳ್ಳುತ್ತೀರಿ; ನೀವು ನಿಮ್ಮ ಶಸ್ತ್ರಗಳನ್ನು ಕೈಗೆತ್ತಿಕೊಳ್ಳದಿದ್ದರೆ ನೀವು ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳುತ್ತೀರಿ ಎಂದಿತ್ತು.
ಗುಜರಾತಿನ ಹಿಂದೂ ಯುವ ವಾಹಿನಿಯ ಜೂನ್ 5ರ ಪೋಸ್ಟ್ ನಲ್ಲಿ ವಿಕಾಸ್ ಅಹಿರ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರಿಗೆ ಬೇಕಾದವರು ಎಂಬಂಥ ಫೋಟೋಗಳನ್ನು ಹಾಕಿದೆ.
ಆದಿತ್ಯನಾಥರು 2002ರಲ್ಲಿ ಆರಂಭಿಸಿದ್ದ ಹಿಂದೂ ಯುವ ವಾಹಿನಿಯಲ್ಲಿ ಅಹಿರ್ ಅವರ ಜೊತೆಗೆ ಇರುವ ಫೋಟೋ ಹಾಕಲಾಗಿದೆ. ಎಚ್ ವೈ ವಿ ಕಾರ್ಯಕರ್ತರು ಉತ್ತರ ಪ್ರದೇಶದಲ್ಲಿ ಹೆಚ್ಚು ಬಲಾಢ್ಯರಿದ್ದು ಅವರನ್ನು ಯೋಗೀಜೀ ಕಾ ಸೇನಾ ಎಂದು ಕರೆಯಲಾಗುತ್ತದೆ. ಗೋರಕ್ ಪುರದಿಂದ ಹೊರಟ ಆ ವಾಹಿನಿಯ ಉದ್ದೇಶ ಯಾವ ಬಗೆಯಿಂದಲಾದರೂ ಜನರನ್ನು ಭಯದಲ್ಲಿ ಇಡುವುದಾಗಿದೆ.
ತೀರಾ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಹಿಂದೂ ಯುವ ವಾಹಿನಿ ಸಭೆಯಲ್ಲಿ ಸುದರ್ಶನ್ ಚಾವಂಕೆ ಎಂಬ ಅದರ ನಾಯಕನು, ಮುಸ್ಲಿಮರನ್ನು ಕೊಲ್ಲಿರಿ, ಹಿಂದೂ ರಾಷ್ಟ್ರ ಕಟ್ಟಿರಿ ಎಂದು ಹೇಳಿರುವುದನ್ನು ಮರೆಯುವುದೆಂತು? ಆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಹಾಗೂ ಉತ್ತರ ಪ್ರದೇಶದ ಮಂತ್ರಿ ರಾಜೇಶ್ವರ ಸಿಂಗ್ ಸಹ ಉಪಸ್ಥಿತರಿದ್ದರು.
ಗುಜರಾತಿನಲ್ಲಿ ಹಿಂದೂ ಯುವ ವಾಹಿನಿಯು 2014ರಲ್ಲಷ್ಟೆ ಆರಂಭವಾಗಿದೆ ಹಾಗೂ 2017ರವರೆಗೆ ಗೌಪ್ಯವಾಗಿತ್ತು. ಅನಂತರ ಲವ್ ಜಿಹಾದ್, ದನ ರಕ್ಷಣೆ, ಮತಾಂತರದ ವಿಷಯಗಳನ್ನು ಹಿಡಿದುಕೊಂಡು, ಜಾಹೀರಾತುಗಳ ಮೂಲಕ ಬೆಳೆಯತೊಡಗಿತು. ಇತ್ತೀಚೆಗೆ ಅವರ ವೆಬ್ ಸೈಟ್ ನಲ್ಲಿ ಅಹಿರ್ ಬಗ್ಗೆ ಡೆಕ್ಕನ್ ಹೆರಾಲ್ಡ್, ಡಿಎನ್ಎ, ಮಿಡ್ ಡೇ ಪತ್ರಿಕೆಗಳಲ್ಲಿ ಬಂದ ವಿಷಯಗಳು ಇವೆ.
ಭಾರತೀಯ ಜನತಾ ಯುವಜನ ಮೋರ್ಚಾದಲ್ಲೂ ಇರುವುದರಿಂದ ಅಹಿರ್ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ಳುವುದು ಮಾಮೂಲು. ನವಸಾರಿ ಸಂಸದ ಹಾಗೂ ಗುಜರಾತ್ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ರಘುನಾಥ ಪಾಟೀಲ್ ಜೊತೆಗೆ ಇರುವ ಫೋಟೋವನ್ನು ಮಾರ್ಚ್ 16, 2022ರಲ್ಲಿ ಅಹಿರ್ ಪೋಸ್ಟ್ ಮಾಡಿದ್ದಾನೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರದ ಕಾರ್ಮಿಕ, ಉದ್ಯೋಗ, ಪರಿಸರ ಮಂತ್ರಿ ಭೂಪೇಂದ್ರ ಯಾದವ್ ಜೊತೆಗೆ ಇರುವ ಫೋಟೋವನ್ನು ಅಹಿರ್ 2022ರ ಜೂನ್ 30ರಂದು ಪೋಸ್ಟ್ ಮಾಡಿದ್ದಾನೆ.
ಅಲ್ಪಸಂಖ್ಯಾತರ ವಿರುದ್ಧ ಬಹುಜನರ ಸವಾರಿ ರಾಜಕೀಯವನ್ನು ಬಯಸುವ ಅಹಿರ್ ಇಬ್ಬರು ಪತ್ರಕರ್ತರ ವಿರುದ್ಧ ಅನಾಮಧೇಯ ಪೋಸ್ಟ್ ದಾಳಿ ನಡೆಸಿದಂತೆ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿರುವುದೂ ಪೋಸ್ಟ್ ಗಳಿಂದ ಸ್ಪಷ್ಟವಿದೆ.
ಝುಬೈರ್ ವಿರುದ್ಧದ ಅಪಪ್ರಚಾರ ಟ್ವೀಟ್ ದಾಳಿಯಲ್ಲಿ ಸ್ಪಷ್ಟವಾಗಿ ಆಳವಾಗಿ ಕಾಣುವುದು ಈಗ ಭಾರತವನ್ನು ಆಳುತ್ತಿರುವ ರಾಜಕೀಯ ಪಕ್ಷದ ಕಾರ್ಯಸೂಚಿ. ಝುಬೈರ್ ಅಪೀಲು ಅರ್ಜಿಗಳನ್ನು ದಾಖಲಿತ ವಿಷಯಗಳ ಬೆಳಕಿನಲ್ಲಿ ನೋಡುವಾಗ ಪ್ರಾಸಿಕ್ಯೂಸನ್ ಪರ ವಾದಿಸುವವರು ಭಾರತದ ಸಾಲಿಸಿಟರ್ ಜನರಲ್ ಎಂಬುದನ್ನು ಮರೆಯುವಂತಿಲ್ಲ. ಒಂದು ವಿನೋದದ ಮೊಕದ್ದಮೆಯಲ್ಲಿ ವಾದಿಸಲು ಕೇಂದ್ರ ಸರಕಾರವು ತಮ್ಮ ಅತಿ ಹಿರಿಯ ವಕೀಲರನ್ನು ನೇಮಿಸಿದೆ ಎಂದರೆ ಇದರ ಹಿಂದಿನ ರಾಜಕೀಯ ಮಜಲು, ಭಾರೀ ಪ್ರಚಾರ ಎಲ್ಲ ಏಕಿತ್ತೆಂಬುದು ಸ್ಪಷ್ಟವಾಗುತ್ತದೆ.
ಎರಡು ಗುಂಪುಗಳ 62% ಖಾತೆಗಳು ಆಚೀಚೆ ಆದ ಗುಂಪುಗಳಿಂದ ಝುಬೈರ್ ರನ್ನು ಟಾರ್ಗೆಟ್ ಮಾಡಿದಂತೆ ಟೆಕ್ ಫಾಗ್ ನೆಟ್ ವರ್ಕ್ ನಟರ ವಲಯದಲ್ಲೂ ತೂರಿ ಹರಿದಿದೆ. ಝುಬೈರ್ ಮೇಲೆ ಹರಿ ಹಾಯ್ದ ಮೂರನೆಯ ಎರಡರಷ್ಟು ಖಾತೆಗಳು ಟೆಕ್ ಫಾಗ್ ನೆಟ್ ವರ್ಕ್ ನದ್ದು ಎನ್ನುವುದು ಸ್ಪಷ್ಟವಾಗಿ ಕಂಡು ಬಂದಿದೆ. ಇವನ್ನು ಇತರ ಅಪಪ್ರಚಾರಗಳಿಗೂ ಬಳಸಲಾಗಿದೆ.
ಟೆಕ್ ಫಾಗ್ ಸಹ ದೇವಾಂಗ್ ದವೆ ಎಂಬ ಭಾರತೀಯ ಜನತಾ ಯುವ ಮೋರ್ಚಾ ನಾಯಕನ ರಹಸ್ಯ ಆಪ್ ಸಂಪರ್ಕವನ್ನು ಹೊಂದಿದೆ. ಅಹಿರ್ ಅಲ್ಲದೆ ಈ ಟೆಕ್ ಫಾಗ್ ಮೂಲಕ ಬಿಜೆಪಿಯನ್ನು ಬೆಂಬಲಿಸಿ ರಾಶಿ ರಾಶಿ ಪೋಸ್ಟ್ ಗಳು ರವಾನೆಯಾಗುತ್ತಲೇ ಇರುತ್ತವೆ. ಆಸಕ್ತಿಯ ಸಂಗತಿ ಎಂದರೆ ಝುಬೈರ್ ವಿರುದ್ಧ ದೂರು ದಾಖಲಾದ ದಿನ ಅಹಿರನ ಬಾಲಾಜೀಕೀಜೆಯ್ಯಿನ್ ಪೋಸ್ಟ್ ಮಾಡಿದ ವಿಷಯಕ್ಕೆ ಲೈಕ್ ಮಾಡಿದ್ದ ಒಬ್ಬರೇ ಒಬ್ಬರು @ಸೈನ್ ಪೋಸ್ಟಿಂಡಿಯಾ; ಈ ಕಂಪೆನಿಯು ದವೆಗೆ ಸೇರಿದ್ದಾಗಿದೆ. ಆ ಖಾತೆ ಹೊಸತಾಗಿಸಿಕೊಂಡಾಗ ಆ ಲೈಕ್ ತೆಗೆದು ಹಾಕಲಾಗಿದೆ. ಏಕೆಂದರೆ ದವೆಯ ಟ್ವಿಟರ್ ಖಾತೆ ಸಂಪರ್ಕವು ಎತ್ತಂಗಡಿ ಎಚ್ಚರಿಕೆ ಪಡೆದಿರಬೇಕು.
(ಕೃಪೆ: ದಿ ವೈರ್)