ಪುರಸಭೆಯ ಆದೇಶವನ್ನು ಉಲ್ಲಂಘಿಸಿ ಫ್ಲೈಓವರ್ ಮೇಲೆ ಬಿಜೆಪಿಯ ಭಿತ್ತಿಪತ್ರ: ಸೂಕ್ತ ಕ್ರಮಕ್ಕೆ SDPI ಆಗ್ರಹ

Prasthutha|

ಬಂಟ್ವಾಳ: ‘ಯಾವುದೇ ಭಿತ್ತಿ ಪತ್ರ ಅಂಟಿಸಬಾರದು’ ಎಂಬ ಪುರಸಭೆಯ ಆದೇಶವನ್ನು ಗಾಳಿಗೆ ತೂರಿ ತಾಲೂಕಿನ ಬಿ.ಸಿ ರೋಡ್ ನಲ್ಲಿರುವ ಫ್ಲೈಓವರ್ ಮೇಲೆ ಬಿಜೆಪಿಯ ಭಿತ್ರಪತ್ರ ಕಳೆದ ಎರಡ್ಮೂರು ದಿನಗಳಿಂದ ಗೋಚರಗೊಂಡಿದ್ದು, ಸಮಾಜದಲ್ಲಿ ದ್ವಂದ್ವಕ್ಕೆ ಕಾರಣವಾಗಿದೆ ಎಂದು ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು ತಿಳಿಸಿದ್ದಾರೆ.

- Advertisement -


2023 ಜನವರಿ 12 ರಂದು ಬಂಟ್ವಾಳ ಪುರಸಭಾ ಸಮಿತಿಯು ನವೀಕೃತಗೊಳ್ಳುತ್ತಿರುವ ಬಿ ಸಿ ರೋಡ್ ನ ಫ್ಲೈ ಓವರ್ ಮೇಲೆ ಯಾವುದೇ ಪಕ್ಷದ, ಸಂಘಟನೆಯ ಬ್ಯಾನರ್, ಭಿತ್ತಿಪತ್ರಗಳು ಯಾವುದನ್ನೂ ಅಳವಡಿಸಬಾರದು ಎಂದು ತನ್ನ ನಿರ್ಣಯದಂತೆ ಕೈಗೊಂಡಿರುವ ಆದೇಶವನ್ನು ಬಿಜೆಪಿ ಪಕ್ಷವು ಉಲ್ಲಂಘಿಸಿದೆ ಎಂದು ಅವರು ಹೇಳಿದ್ದಾರೆ.


ಬಿಜೆಪಿಯ ಪ್ರಚಾರದ ಭಿತ್ತಿ ಪತ್ರವನ್ನು ಮೇಲ್ಸೇತುವೆಯಡಿಯಲ್ಲಿ ಅಂಟಿಸಿದ್ದು, ಈ ರೀತಿ ಉಲ್ಲಂಘನೆ ಮಾಡಿದವರ ವಿರುದ್ಧ ಬಂಟ್ವಾಳ ಪುರಸಭಾ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು, ಈ ಹಿಂದೆ ಆದೇಶದಲ್ಲಿ ಉಲ್ಲೇಖಿಸಿದ ಹಾಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಶರೀಫ್ ವಳವೂರು ಆಗ್ರಹಿಸಿದ್ದಾರೆ.