ಪ್ಯಾಲೆಸ್ತೀನ್‌ ಬೆಂಬಲಕ್ಕೆ ಬಿಜೆಪಿಗರ ಆಕ್ಷೇಪ: ಇಂಥಾ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದ ಉವೈಸಿ

Prasthutha|

ನವದೆಹಲಿ: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ಯಾಲೆಸ್ತೀನ್‌‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಇದನ್ನು ಆಡಳಿತಾರೂಢ ಪಕ್ಷದ ಸಂಸದರು ಖಂಡಿಸಿದ್ದಾರೆ. ಉವೈಸಿಯ ಸಂಸತ್ ಸಸಸ್ಯತ್ವ ಅನರ್ಹತೆಗೆ ಮನವಿಯನ್ನೂ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಸಾದುದ್ದೀನ್ ಉವೈಸಿ, ಇಂಥಾ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಎಲ್ಲರೂ ತುಂಬಾನೇ ಹೇಳುತ್ತಿದ್ದಾರೆ. ನಾನು ಕೇವಲ ‘ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್’ ಎಂದು ಹೇಳಿದ್ದೇನೆ.. ಅದು ಹೇಗೆ ತಪ್ಪು? ಸಂವಿಧಾನದಲ್ಲಿ ಅದು ತಪ್ಪು ಅಂತ ಹೇಳಿರುವುದನ್ನು ತೋರಿಸಿ ಎಂದಿದ್ದಾರೆ.

ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನನಗೂ ಸಂವಿಧಾನದ ಬಗ್ಗೆ ಸ್ವಲ್ಪ ತಿಳಿದಿದೆ, ಈ ಪೊಳ್ಳು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಉವೈಸಿ ಹೇಳಿದ್ದಾರೆ.

Join Whatsapp