ಬಿಜೆಪಿಯ ಕೊಳಕು ರಾಜಕಾರಣ, ಸೋಲಿಗೆ ಕಾರಣ: ಅರವಿಂದ್ ಕೇಜ್ರಿವಾಲ್

Prasthutha|

ಹೊಸದಿಲ್ಲಿ: ಬಿಜೆಪಿಯ ಕೊಳಕು ರಾಜಕಾರಣವನ್ನು ಜನರು ಸೋಲಿಸಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ರಾಜೇಂದ್ರ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ ಗೆಲುವಿಗೆ ಹರ್ಷ ವ್ಯಕ್ತಪಡಿಸಿ ಈ ಹೇಳಿಕೆಯನ್ನು ನೀಡಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಜನರು ಬಿಜೆಪಿಯ ಕೊಳಕು ರಾಜಕೀಯವನ್ನು ಸೋಲಿಸಿದ್ದಾರೆ. ನಮ್ಮ ಉತ್ತಮ ಕೆಲಸವನ್ನು ಮೆಚ್ಚಿದ್ದಾರೆ’.‘ರಾಜೇಂದ್ರ ನಗರದ ಜನರಿಗೆ ಹೃತ್ಪೂರ್ವಕ ಧನ್ಯವಾದಗಳು. ದೆಹಲಿಯ ಜನರ ಈ ಅಪಾರ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನಮಗೆ ಹೆಚ್ಚು ಶ್ರಮಿಸಲು ಮತ್ತು ಜನರ ಸೇವೆ ಮಾಡಲು ಸ್ಫೂರ್ತಿ ನೀಡಲಿದೆ’ ಎಂದು ಕೃತಜ್ಞತೆ ಅರ್ಪಿಸಿದರು.

ರಾಜೇಂದ್ರ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ದುರ್ಗೇಶ್ ಪಾಠಕ್ ಅವರು ಬಿಜೆಪಿಯ ಅಭ್ಯರ್ಥಿ ರಾಜೇಶ್ ಭಾಟಿಯಾ ವಿರುದ್ಧ 11,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.



Join Whatsapp