ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಕೇಸ್ ಸಿಐಡಿ ತನಿಖೆಗೆ

Prasthutha|

ಬೆಂಗಳೂರು: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನಿನ್ನೆ ಬಿಜೆಪಿಯ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯೋ ಮುಂಚೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಹೆಸರು ಹೇಳಿದ್ದನು. ಇದು ಬಿಜೆಪಿಗರಿಗೆ ಆಹಾರವಾಗಿತ್ತು. ಇದೀಗ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಿದೆ.

- Advertisement -

ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ, ಪ್ರಕರಣದ ತನಿಖಾ ವರದಿ ಬಂದ ಮೇಲೆ ಸತ್ಯಾಂಸ ಹೊರಬರಲಿದೆ. ಇದಕ್ಕೆ ಏನು ಕಾರಣ ಎಂದು ಸಂಪೂರ್ಣವಾಗಿ ಹೊರಬೀಳಲಿದೆ ಎಂದು ಹೇಳಿದರು.

ಸಚಿವರು ಭಾಗಿಯಾಗಿದ್ದಾರೆ ಎಂದುಅವರ್ಯಾರು ಹೇಳಿಕೆ ಕೊಡುತ್ತಿದ್ದಾರೋ ಆ ಹೇಳಿಕೆಗಳ ಬಗ್ಗೆ ತನಿಖೆ ಮಾಡಬೇಕಾಗುತ್ತದೆ. ಸಮಗ್ರ ತನಿಖೆ ಪರಿಶೀಲನೆ ಆಗಲಿ ಎಂದು ಸಿಐಡಿ ತನಿಖೆಗೆಗೆ ಕೊಟ್ಟಿರುವುದು ಎಂದು ಪರಮೇಶ್ವರ್ ಹೇಳಿದ್ದಾರೆ.

- Advertisement -

ಮೃತನ ಪತ್ನಿ ಕೂಡ ಚಿಂಚೋಳಿ ತಾಲೂಕಿನ ಸುಲೇಪೇಟ್ ಠಾಣೆಯಲ್ಲಿ “ಸಾಲಭಾದೆ ಹಾಗೂ ಬೆಳೆ ನಾಶವಾಗಿದ್ದರಿಂದ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ. ಸಚಿವ ಶರಣಪ್ರಕಾಶ್ ಪಾಟೀಲ್ ಕೂಡ “ಈ ವ್ಯಕ್ತಿ ಯಾರು ಅಂತಾನೇ ನನಗೆ ಗೊತ್ತಿಲ್ಲ. ಒಂದು ಬಾರಿಯೂ ಈತನ ಜೊತೆ ಮಾತನಾಡಿಲ್ಲ. ಅವನ ಜೊತೆ ಯಾವುದೇ ರೀತಿಯಾಗಿ ಸಂಪರ್ಕ ಇಲ್ಲ” ಎಂದು ತಿಳಿಸಿದ್ದರು.