ಬರೋಬ್ಬರಿ 110 ಕೆಜಿ ಗಾಂಜಾ ಸಾಗಾಟ: ಬಿಜೆಪಿ ಕಾರ್ಯಕರ್ತನ ಬಂಧನ

Prasthutha|

ಪಾಲಕ್ಕಾಡ್: ಬರೊಬ್ಬರಿ 110 ಕೆಜಿ ಗಾಂಜಾದೊಂದಿಗೆ ಪ್ರಯಾಣಿಸುತ್ತಿದ್ದ ಬಿಜೆಪಿ ಕಾರ್ಯಕರ್ತನನ್ನು ಆಂಧ್ರಪ್ರದೇಶದಲ್ಲಿ ಪೊಲೀಸರು ಬಂಧಿಸಲಾಗಿದೆ.

- Advertisement -


ಕೇರಳದ ಪಾಲಕ್ಕಾಡ್ ನ ಕೊಡುಂಬ್ ಕರಿಂಕಾರಪುಳ್ಳಿಯ ನಿವಾಸಿ ರಾಜು (30) ಬಂಧಿತ ಆರೋಪಿ ಎಂದು ಗುರುತಿಸಲಾಗಿದ್ದು, ಆತ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಎಂದು ತಿಳಿದು ಬಂದಿದೆ.


ರಾಜು ಸಹಿತ ಇಬ್ಬರು ಸಹ ಪ್ರಯಾಣಿಕರನ್ನು ಆಂಧ್ರಪ್ರದೇಶದ ತುನಿಯಲ್ಲಿ ಬಂಧಿಸಲಾಗಿದ್ದು, ಕಾರಿನಲ್ಲಿ ಇದ್ದ ನಾಲ್ಕನೇ ವ್ಯಕ್ತಿ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಆರೋಪಿಯನ್ನು ಪತ್ತೆ ಹಚ್ಚಲು ಆಂಧ್ರ ಪೊಲೀಸರು ಪಾಲಕ್ಕಾಡ್ ದಕ್ಷಿಣ ಪೊಲೀಸರ ಸಹಾಯವನ್ನು ಕೋರಿದ್ದಾರೆ ಎಂದು ತಿಳಿದು ಬಂದಿದೆ.

- Advertisement -


ಬಿಜೆಪಿ ಕಾರ್ಯಕರ್ತ ರಾಜು ವಿರುದ್ಧ ದಕ್ಷಿಣ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.



Join Whatsapp