ಇನ್ನು ಆರು ತಿಂಗಳಲ್ಲಿ ಬಿಜೆಪಿ ಉಳಿಯಲ್ಲ: ಪ್ರಿಯಾಂಕ್ ಖರ್ಗೆ

Prasthutha|

ಕಲಬುರಗಿ: ಇನ್ನು ಆರು ತಿಂಗಳಲ್ಲಿ ಬಿಜೆಪಿ ಉಳಿಯಲ್ಲ. ನಾನು ಇದಕ್ಕೆ ಗ್ಯಾರಂಟಿ ಕೊಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -


ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಮಗೂ ರಾಜಕೀಯ ಮಾಡುವುದಕ್ಕೆ ಬರುತ್ತದೆ. ಅವರೊಬ್ಬರಿಗೆ ಮಾತ್ರ ಬರುತ್ತದೆಯಾ? ನಮಗೆ ಬರುವುದಿಲ್ಲವೇ? ನಾವೂ 140 ವರ್ಷಗಳಿಂದ ಪಕ್ಷವನ್ನು ಕಟ್ಟಿಕೊಂಡು ಬರುತ್ತಿದ್ದೇವೆ ಎಂದರು.


ಕರ್ನಾಟಕದಲ್ಲಿ ಅವರದ್ದು (ಬಿಜೆಪಿ) ಏನೂ ನಡೆದಿಲ್ಲ. ಮುಂದೆಯೂ ನಡೆಯಲ್ಲ. ಇನ್ನು ಆರು ತಿಂಗಳಲ್ಲಿ ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ ಎಂದರು.

Join Whatsapp