ಹರಿಯಾಣದಲ್ಲಿ ಮುಸ್ಲಿಂ ಮೀಸಲಾತಿಗೆ ಬಿಜೆಪಿ ಅವಕಾಶ ನೀಡಲ್ಲ: ಅಮಿತ್‌ ಶಾ

Prasthutha|

ಚಂಡೀಗಢ: ಹರಿಯಾಣದಲ್ಲಿ ಮುಸ್ಲಿಂ ಮೀಸಲಾತಿಗೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

- Advertisement -

ರಾಜ್ಯದಲ್ಲಿ ‘ಹಿಂದುಳಿದ ವರ್ಗಗಳ ಸಮ್ಮಾನ್ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಕಾಕಾ ಕಾಲೇಕರ್ ಆಯೋಗವು ಮಾಡಿದ ಶಿಫಾರಸುಗಳನ್ನು ಕಾಂಗ್ರೆಸ್ ವರ್ಷಗಳಿಂದ ಜಾರಿಗೆ ತಂದಿಲ್ಲ ಎಂದರು.

ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲಿದೆ. 1980 ರಲ್ಲಿ, (ಅಂದಿನ ಪ್ರಧಾನಿ) ಇಂದಿರಾಗಾಂಧಿ ಮಂಡಲ್ ಆಯೋಗವನ್ನು ಕೋಲ್ಡ್ ಸ್ಟೋರೇಜ್‌ ನಲ್ಲಿ ಇರಿಸಿದರು. 1990 ರಲ್ಲಿ ಅದನ್ನು ಅಂಗೀಕರಿಸಿದಾಗ, ರಾಜೀವ್ ಗಾಂಧಿ ಅವರು ಎರಡೂವರೆ ಗಂಟೆಗಳ ಭಾಷಣವನ್ನು ನೀಡಿದರು ಮತ್ತು ಒಬಿಸಿ ಮೀಸಲಾತಿಯನ್ನು ವಿರೋಧಿಸಿದ್ದರು ಎಂದು ತಿಳಿಸಿದ್ದಾರೆ.



Join Whatsapp