ವಿಪಕ್ಷಗಳ ಒಗ್ಗಟ್ಟು | 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ರಾಹುಲ್ ಗಾಂಧಿ

Prasthutha|

ಪಟ್ನಾ: ಪಟ್ನಾದಲ್ಲಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2024r ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -


ನಾವೆಲ್ಲರೂ ಜೊತೆಯಾಗಿ ಬಿಜೆಪಿಯನ್ನು ಸೋಲಿಸಲಿದ್ದೇವೆ. ಅದಕ್ಕಾಗಿಯೇ ಒಗ್ಗೂಡಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.


ದೇಶದಲ್ಲಿ ಸಿದ್ಧಾಂತಗಳ ನಡುವೆ ಕದನ ನಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ ನ ‘ಭಾರತ್ ಜೋಡೊ’ ಮತ್ತೊಂದೆಡೆ ಬಿಜೆಪಿ-ರ್ ಎಸ್ ಎಸ್ ನ ‘ಭಾರತ್ ತೋಡೊ’ (ಮುರಿಯುವ) ಸಿದ್ಧಾಂತ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಡಿಎನ್ ಎ ಇರುವುದರಿಂದ ಇಲ್ಲಿಗೆ ಬಂದಿದ್ದೇವೆ ಎಂದು ಪಾಟ್ನಾದಲ್ಲಿ ಹೇಳಿದ್ದಾರೆ.