ಬೆಂಗಳೂರು: ಒಂದೇ ಭಾಷೆ, ಒಂದೇ ಸಂಸ್ಕೃತಿಯನ್ನು ಹೇರಲು ಹೊರಟಿರುವ ಬಿಜೆಪಿ ಪಕ್ಷ ಭಾರತದ ವಿವಿಧತೆಯನ್ನು ಮುಗಿಸಿ ಹಾಕಲು ಪಣ ತೊಟ್ಟಿರುವಂತಿದೆ ಎಂದು ಕೆಪಿಸಿಸಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಸಂಸ್ಕೃತಿ ಸಚಿವಾಲಯವು ಬೆಂಗಳೂರಿನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತ್ರಿಭಾಷೆಯೂ ಇಲ್ಲ, ದ್ವಿಭಾಷೆಯೂ ಇಲ್ಲ. ಹಿಂದಿಯೇ ಎಲ್ಲಾ !. ಕನ್ನಡನಾಡಿನಲ್ಲಿ ಕನ್ನಡವನ್ನೇ ಮುಗಿಸಿಹಾಕಲು ರಾಜ್ಯ ಬಿಜೆಪಿ ಪಣ ತೊಟ್ಟಿದೆ ಎಂದು ವಾಗ್ದಾಳಿ ನಡೆಸಿದೆ.