ಬೆಂಗಳೂರು: ‘ಬಿಜೆಪಿಯವರು ರಾಜಕೀಯ ತಂತ್ರಕ್ಕೆ ವಿಧಾನಮಂಡಲ ಅಧಿವೇಶನವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಆರೋಪಿಸಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಮುಡಾ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲವೆಂದು ವಿರೋದ ಪಕ್ಷದವರು ಅಹೋರಾತ್ರಿ ಧರಣಿ ಮಾಡಿದ್ದಾರೆ. ನಿಲುವಳಿ ಪ್ರಸ್ತಾವ ಯಾಕೆ ಮಾಡಬಾರದು ಎನ್ನುವುದನ್ನು ನಾವು ವಿವರಿಸಿದ್ದೇವೆ. ಆದರೂ ಅವರು ಧರಣಿ ಮಾಡುತ್ತಿದ್ದಾರೆ’ ಎಂದರು.
‘ತಮ್ಮ ಮೇಲೆಯೇ ಆಪಾದನೆ ಇದ್ದರೂ ತನಿಖೆಗೆ ಮುಖ್ಯಮಂತ್ರಿ ಅವರು ವಿಚಾರಣಾ ಆಯೋಗ ರಚಿಸಿದ್ದಾರೆ. ತನ್ನ ಮೇಲೆ ಆರೋಪ ಇದ್ದಾಗ ಯಾರಾದರೂ ಒಬ್ಬ ಮುಖ್ಯಮಂತ್ರಿ ತನಿಖಾ ಆಯೋಗ ರಚಿಸಿರುವ ನಿದರ್ಶನ ಇದೆಯೇ‘ ಎಂದು ಪಾಟೀಲ ಪ್ರಶ್ನಿಸಿದರು.