ಪರಿಸ್ಥಿತಿ ಅಧ್ಯಯನಕ್ಕೆ ಬಿಜೆಪಿ ಪ್ರವಾಸ: ನಳಿನ್ ಕುಮಾರ್

Prasthutha|

- Advertisement -

ಮಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಲು ಬಿಜೆಪಿ ನಿರ್ಧರಿಸಿದೆ. ಇದಕ್ಕಾಗಿ 17 ತಂಡಗಳನ್ನು ರಚಿಸಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಈ ತಂಡಗಳು ಪ್ರಯಾಣ ಮಾಡಲಿದ್ದು, ನವೆಂಬರ್ 10ರ ಒಳಗೆ ವರದಿ ಸಲ್ಲಿಸಲಿವೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಪೀಡಿತ ತಾಲ್ಲೂಕುಗಳ ಹೆಸರನ್ನು ಘೋಷಿಸಿದೆಯಾದರೂ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ದೂರಿದ್ದಾರೆ.

- Advertisement -

5 ತಿಂಗಳಲ್ಲಿ ರಾಜ್ಯದಲ್ಲಿ 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಪರಿಹಾರಕ್ಕೆ ಸಂಬಂಧಿಸಿ ಅನುದಾನ ಪಡೆಯಲು ಕೈಗೊಳ್ಳಬೇಕಾದ ಪ್ರಕ್ರಿಯೆಗಳನ್ನು ಮಾಡದೇ ಕೇಂದ್ರವನ್ನು ದೂರುತ್ತಿರುವ ಮುಖ್ಯಮಂತ್ರಿ ಜಾಣ ಮರೆವು ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿದ್ದು, ಒಂದು ತಂಡ ತುಮಕೂರು ಮತ್ತೊಂದು ತಂಡ ಬೆಂಗಳೂರು ಜಿಲ್ಲೆಯನ್ನು ಸಂದರ್ಶಿಸಲಿದೆ ಎಂದರು.

ನೇತೃತ್ವ ಮತ್ತು ತಂಡದ ಪ್ರವಾಸದ ವಿವರ

ಬಸನಗೌಡ ಪಾಟೀಲ ಯತ್ನಾಳ: ಮೈಸೂರು-ಚಾಮರಾಜನಗರ.

ಸಿ.ಟಿ.ರವಿ:
ಕೋಲಾರ-ಚಿಕ್ಕಬಳ್ಳಾಪುರ

ಅರವಿಂದ ಬೆಲ್ಲದ: ರಾಯಚೂರು-ಯಾದಗಿರಿ

ಬಿ.ವೈ.ವಿಜಯೇಂದ್ರ:
ಬೀದರ್ -ಕಲಬುರಗಿ

ಕೆ.ಎಸ್‌.ಈಶ್ವರಪ್ಪ:
ಬಳ್ಳಾರಿ-ಕೊಪ್ಪಳ

ಶ್ರೀರಾಮುಲು:
ಹಾವೇರಿ-ಗದಗ

ಅರವಿಂದ ಲಿಂಬಾವಳಿ: ಬೆಳಗಾವಿ-ಚಿಕ್ಕೋಡಿ

ನಳಿನ್ ಕುಮಾರ್ ಕಟೀಲ್: ವಿಜಯಪುರ-ಬಾಗಲಕೋಟೆ.

ಸುನಿಲ್ ಕುಮಾರ್:
ಶಿವಮೊಗ್ಗ-ಉತ್ತರ ಕನ್ನಡ

ಆರಗ ಜ್ಞಾನೇಂದ್ರ: ಉಡುಪಿ-ಚಿಕ್ಕಮಗಳೂರು.

ವಿಶ್ವೇಶ್ವರ ಹೆಗಡೆ ಕಾಗೇರಿ: ದಾವಣಗೆರೆ-ಚಿತ್ರದುರ್ಗ

ಆರ್‌. ಅಶೋಕ:
ದಕ್ಷಿಣ ಕನ್ನಡ-ಕೊಡಗು.

ಡಿ.ವಿ.ಸದಾನಂದಗೌಡ:
ಮಂಡ್ಯ-ಹಾಸನ

ಕೋಟ ಶ್ರೀನಿವಾಸ ಪೂಜಾರಿ: ಬೆಂಗಳೂರು ಗ್ರಾಮಾಂತರ-ರಾಮನಗರ

ಗೋವಿಂದ ಕಾರಜೋಳ: ಧಾರವಾಡ-ವಿಜಯನಗರ

Join Whatsapp