ತಮಿಳುನಾಡಿನಲ್ಲಿ ಟಿವಿ ಚಾನೆಲ್ ಆರಂಭಿಸಲಿರುವ ಬಿಜೆಪಿ: ಅಣ್ಣಾಮಲೈ ನೇತೃತ್ವ

Prasthutha|

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಟಿವಿ ಚಾನೆಲ್ ಆರಂಭಿಸಲು ಮುಂದಾಗಿದೆ.

- Advertisement -


ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರವಾಗಿ ಅನಾವರಣ ಮಾಡಲಾಗುತ್ತದೆ.


ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ನೇತೃತ್ವದಲ್ಲಿ ಈ ಚಾನೆಲ್ ಕೆಲಸ ಮಾಡಲಿದ್ದು, ತನ್ನ ರಾಜಕೀಯ ಧ್ಯೇಯೋಧ್ದೇಶಗಳನ್ನು ಜನರ ಮನೆ ಮನೆಗೆ ತಲುಪಲು ಬಿಜೆಪಿ ಮುಂದಾಗಿದೆ.
ಬಿಜೆಪಿಯ ಈ ನಡೆ ತಮಿಳುನಾಡಿನ ಇತರೆ ರಾಜಕೀಯ ಪಕ್ಷಗಳಿಗೆ ಆಶ್ಚರ್ಯ ಮೂಡಿಸಿದೆ. ಈಗಾಗಲೇ ಕೇರಳದಲ್ಲಿ ಬಿಜೆಪಿ ಬೆಂಬಲದೊಂದಿಗೆ ಮುನ್ನಡೆಯುತ್ತಿರುವ ‘ಜನಂ’ ಟಿವಿ ಮಾದರಿಯಲ್ಲೇ ಬಹುತೇಕ ಅದೇ ಹೆಸರಿನಲ್ಲಿ ಈ ಚಾನೆಲ್ ಅಸ್ತಿತ್ವಕ್ಕೆ ಬರಲಿದೆ.

Join Whatsapp