ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಕೇವಲ ಎರಡು ವಾರಗಳು ಬಾಕಿ ಇರುವಂತೆಯೇ ಅಶಿಸ್ತಿನ ವರ್ತನೆಗೆ ಸಂಬಂಧಿಸಿ ಏಳು ನಾಯಕರನ್ನು ಗುಜರಾತ್‌ನ ಬಿಜೆಪಿ ಅಮಾನತುಗೊಳಿಸಿದೆ.
ಇಬ್ಬರು ಮಾಜಿ ಶಾಸಕರು ಸೇರಿದಂತೆ ಏಳು ಮಂದಿ ನಾಯಕರು ಪಕ್ಷದ ಸೂಚನೆಯನ್ನು ಉಲ್ಲಂಘಿಸಿ ಡಿಸೆಂಬರ್ 1ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕರಾದ ಹರ್ಷದ್ ವಾಸವ, ಅರವಿಂದ ಲಡಾನಿ, ಛತ್ರಸಿನ್ಹ ಗುಂಜಾರ, ಕೇತನ್, ಭರತ್ ಚಾವ್ಡಾ, ಉದಯ್ ಶಾ ಮತ್ತು ಕರಣ್ ಭರಯ್ಯ ಅವರನ್ನು ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಸೂಚನೆ ಮೇರೆಗೆ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.