ಬಿಜೆಪಿ ಇನ್ನೂ ‘ಖಾಕಿ ಚಡ್ಡಿ’ಯಲ್ಲಿ ಸಿಲುಕಿಕೊಂಡಿದೆ: ಭೂಪೇಶ್ ಬಘೇಲ್

Prasthutha|

ರಾಯ್ ಪುರ: ಬಿಜೆಪಿ ಇನ್ನೂ ಟಿ-ಶರ್ಟ್ ಮತ್ತು ಖಾಕಿ ಚಡ್ಡಿಯಲ್ಲಿ ಸಿಲುಕಿಕೊಂಡಿರುವಾಗ ಕಾಂಗ್ರೆಸ್ ದೇಶವನ್ನು ಒಗ್ಗೂಡಿಸುವಲ್ಲಿ ನಿರತವಾಗಿದೆ ಎಂದು ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಕಿಡಿಕಾರಿದ್ದಾರೆ.

- Advertisement -

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಅತಿದೊಡ್ಡ ಭಾರತ್ ಜೋಡೋ ಯಾತ್ರೆಯ ವಿರುದ್ಧ ಕೇಂದ್ರವು ಕೇವಲ ‘ಟಿ-ಶರ್ಟ್’ ಅನ್ನು ಹಿಡಿದು ಕಾಂಗ್ರೆಸ್ ಅನ್ನು ವಿಮುಖಗೊಳಿಸಲು ನೋಡುತ್ತಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ, ಒಂದು ಪಕ್ಷವು ದೇಶವನ್ನು ಒಗ್ಗೂಡಿಸುತ್ತಿರುವಾಗ, ಬಿಜೆಪಿಯು  ಇನ್ನೂ ಟಿ-ಶರ್ಟ್ ಗಳು ಮತ್ತು ಖಾಕಿ ಚಡ್ಡಿಗಳಲ್ಲಿ ನೇತಾಡುತ್ತಿದೆ ಎಂದು ಬಘೇಲ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನ ‘ಭಾರತ್ ಜೋಡೋ ಯಾತ್ರೆ’ ಮೂರನೇ ದಿನವನ್ನು ತಲುಪುತ್ತಿದ್ದಂತೆ, ರಾಹುಲ್ ಗಾಂಧಿ ಅವರ ಟೀ ಶರ್ಟ್ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮುಖಾಮುಖಿ ನಡೆದಿದೆ.

- Advertisement -

‘ಭಾರತ್ ಜೋಡೋ ಯಾತ್ರೆ’ಯ ಸಮಯದಲ್ಲಿ ಹಣದುಬ್ಬರದ ವಿಷಯವನ್ನು ಎತ್ತುತ್ತಿರುವ ರಾಹುಲ್ ಗಾಂಧಿ ಅವರು ಶುಕ್ರವಾರ 41,257 ರೂ.ಗಳ ಮೌಲ್ಯದ ಟಿ-ಶರ್ಟ್ ಧರಿಸಿದ್ದರು ಎಂದು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.

ಮತ್ತೊಂದೆಡೆ ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆಗೆ ಜನರ ಪ್ರತಿಕ್ರಿಯೆಯನ್ನು ನೋಡಿ ಕೇಂದ್ರದ ಆಡಳಿತ ಪಕ್ಷವು ಹೆದರುತ್ತಿದೆ ಎಂದು ಹೇಳಿದೆ.

Join Whatsapp