ನನ್ನ ಕೊಲೆ ನಡೆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರಣ: ಸತ್ಯಜಿತ್ ಸುರತ್ಕಲ್

Prasthutha|

ಮಂಗಳೂರು: ನನಗೆ ನೀಡಿದ ಭದ್ರತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಪ್ಪಿಸಿದ್ದಾರೆ. ಒಂದು ವೇಳೆ ನನ್ನ ಕೊಲೆಯಾದರೆ ಅವರೇ ಕಾರಣ ಎಂದು ಸಂಘಪರಿವಾರದ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜ್ಯಾದ್ಯಂತ ಸಂಘಟನೆಯ ವಿಚಾರವಾಗಿ ಪ್ರವಾಸ ಮಾಡುತ್ತೇನೆ. ಮೂಲಭೂತವಾದಿಗಳಿಂದ ನಿರಂತರವಾಗಿ ಬೆದರಿಕೆ ಇದೆ. 16 ವರ್ಷದ ಹಿಂದೆ ಸರ್ಕಾರವೇ ನನಗೆ ‘ಗನ್ ಮ್ಯಾನ್’ ನೀಡಿತ್ತು. ಆದರೆ ಈಗ ಏಕಾಏಕಿ ಗನ್ ಮ್ಯಾನ್ ಹಿಂಪಡೆಯಲಾಗಿದೆ. ಮೂಲಭೂತವಾದಿಗಳಿಂದ ಹತ್ಯೆಯಾದರೆ ಅದಕ್ಕೆ ನೇರ ಹೊಣೆ ಬಿಜೆಪಿ ರಾಜ್ಯಾಧ್ಯಕ್ಷರು. ನನ್ನ ಹತ್ಯೆಯಾದರೆ ನನ್ನ ಅಂತಿಮ ದರ್ಶನಕ್ಕೆ ಬಿಜೆಪಿ ಮುಖಂಡರು, ಸಂಘ ಪರಿವಾರದ ನಾಯಕರಿಗೆ ಅವಕಾಶ ಇಲ್ಲ ಎನ್ನುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

Join Whatsapp