ವಕ್ಫ್ ಆಸ್ತಿ ಡ್ರೋನ್ ಸರ್ವೇಗೆ ರಾಜ್ಯ ಬಿಜೆಪಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಗರಂ

Prasthutha|

►ಇದೊಂದು ಕಣ್ಣೊರೆಸುವ ತಂತ್ರ, ಅಲ್ಪಸಂಖ್ಯಾತರ ಕಡೆಗಣನೆ ಎಂದ ಬಿಜೆಪಿ ನಾಯಕ

- Advertisement -

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಅನ್ವರ್ ಮಾಣಿಪ್ಪಾಡಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಪ್ರಸ್ತುತ ನ್ಯೂಸ್ ಜೊತೆ ಮಾತನಾಡಿದ ಅವರು, ವಕ್ಫ್ ಆಸ್ತಿಯನ್ನು ಡ್ರೋನ್ ಮೂಲಕ ಸರ್ವೇ ಮಾಡಲು ಸಾಧ್ಯವಿಲ್ಲ. ಇದು ಕೇವಲ ಕಣ್ಣೊರೆಸುವ ತಂತ್ರವಾಗಿದೆ ಎಂದು ಹೇಳಿದರು. ಸರ್ಕಾರಕ್ಕೆ ಸರ್ವೇ ಮಾಡುವ ಉದ್ದೇಶವಿದ್ದರೆ ಖಾಸಗೀಯವರಿಗೆ ನೀಡಲಿ, ಯಾರೆಲ್ಲ ಖದೀಮರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ನಾವೇ ತಿಳಿಸುತ್ತೇವೆ ಎಂದು ಹೇಳಿದರು.

- Advertisement -

ಇದು ಕಳ್ಳರನ್ನು ರಕ್ಷಿಸುವ ತಂತ್ರ. ವಕ್ಫ್ ಆಸ್ತಿ ಭ್ರಷ್ಟಾಚಾರದ ಬಗ್ಗೆ ನಾನು ಯಡಿಯೂರಪ್ಪರವರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದೆ. ಆದರೆ ಅವರು ಕೂಡ ಸ್ಪಂದಿಸಿಲ್ಲ. ಬೊಮ್ಮಾಯಿಯವರು ಕೂಡ ಇದೇ ರೀತಿ ಹೇಳುತ್ತಾರೆ. ಇವರು ನನ್ನನ್ನು ಕರೆಸಿ ಮಾತನಾಡಿದರೇ ಇದರ ಬಗ್ಗೆ ಸಂಪೂರ್ಣ ವಿವರ ನೀಡುತ್ತೇನೆ ಎಂದರು.

 ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ. ಮುಸ್ಲಿಮ್ ನಾಯಕರು ಸರಿಯಾಗಿ ಸ್ಪಂದಿಸಬೇಕು ಇಲ್ಲದಿದ್ದರೆ, ಇದು ಹೀಗೆ ಮುಂದುವರೆಯುತ್ತದೆ ಎಂದು ಅವರು ಎಚ್ಚರಿಸಿದರು.

Join Whatsapp