ಹರಿಯಾಣದಲ್ಲಿ ಕಾಂಗ್ರೆಸ್ ಸೋಲು: ರಾಹುಲ್ ಗಾಂಧಿ ಮನೆಗೆ ಜಿಲೇಬಿ ಕಳುಹಿಸಿದ ಬಿಜೆಪಿ

Prasthutha|

ನವದೆಹಲಿ: ಹರಿಯಾಣ ಬಿಜೆಪಿ ಘಟಕವು ಮಂಗಳವಾರ ಐತಿಹಾಸಿಕ ಮೂರನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದನ್ನು ಸಂಭ್ರಮದಿಂದ ಆಚರಿಸಿದೆ.

- Advertisement -


ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರಿಗೆ ಅವರ ಮನೆಗೆ ಬಿಜೆಪಿ 1 ಕೆಜಿ ಜಿಲೇಬಿಯನ್ನು ಕಳುಹಿಸಿದೆ.


ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಜಿಲೇಬಿ ಟ್ರೆಂಡಿಂಗ್ ನಲ್ಲಿದೆ.

- Advertisement -


ಹರಿಯಾಣದಲ್ಲಿ ಬಿಜೆಪಿ ಎಲ್ಲಾ ಕಾರ್ಯಕರ್ತರ ಪರವಾಗಿ ರಾಹುಲ್ ಗಾಂಧಿಯವರ ಮನೆಗೆ ಜಿಲೇಬಿಯನ್ನು ಕಳುಹಿಸಲಾಗಿದೆ ಎಂದು ಬಿಜೆಪಿ ಎಕ್ಸ್ನಲ್ಲಿ ತಿಳಿಸಿದೆ.


ದೆಹಲಿ ಮೂಲದ ಫುಡ್ ಡೆಲಿವರಿ ಆ್ಯಪ್ ಆದ ಸ್ವಿಗ್ಗಿಯ ಅಪ್ಲಿಕೇಶನ್ ನ ಸ್ಕ್ರೀನ್ಶಾಟ್ ಅನ್ನು ಎಕ್ಸ್ ನಲ್ಲಿ ಲಗತ್ತಿಸಲಾಗಿದೆ. ರಾಹುಲ್ ಗಾಂಧಿಗೆ ಸ್ವಿಗ್ಗಿಯಲ್ಲಿ ಜಿಲೇಬಿ ಕಳುಹಿಸಲಾಗಿದ್ದು, ಕ್ಯಾಶ್ ಆನ್ ಡೆಲಿವರಿ ಆಯ್ಕೆ ನೀಡಲಾಗಿದೆ! ರಾಹುಲ್ ಗಾಂಧಿಯವರೇ ಹಣ ಪಾವತಿಸಿ ಈ ಜಿಲೇಬಿ ಬಾಕ್ಸ್ ಪಡೆಯಬೇಕಾಗುತ್ತದೆ ಎಂದು ಹೇಳಿದೆ.



Join Whatsapp