ಬಿಜೆಪಿ ತುಘಲಕ್ ಮಾದರಿ ಆಡಳಿತ ನಡೆಸುತ್ತಿದೆ: SSC ಗದ್ದಲದ ಮಧ್ಯೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟೀಕೆ

Prasthutha|

ಕೋಲ್ಕತ್ತಾ: SSC ನೇಮಕಾತಿಯಲ್ಲಿನ ಅಕ್ರಮದ ಕುರಿತ ಗದ್ದಲದ ಮಧ್ಯೆ ಬಿಜೆಪಿ ತುಘಲಕ್ ಮಾದರಿಯಲ್ಲಿ ಆಡಳಿತ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ,ಕೇಂದ್ರ ಸರ್ಕಾರ ರಾಜಕೀಯದಲ್ಲಿನ ಅಂಕಗಳನ್ನು ಸಂಪಾದಿಸಲು ಒಕ್ಕೂಟ ವ್ಯವಸ್ಥೆಯ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬಿಜೆಪಿ ದೇಶದಲ್ಲಿ ತುಘಲಕಿ ಆಡಳಿತವನ್ನು ನಡೆಸುತ್ತಿದೆ ಮತ್ತು ರಾಷ್ಟ್ರವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ರಾಜಕೀಯ ಅಂಕಗಳನ್ನು ಸಂಪಾದಿಸಲು ಅವರು ಕೇಂದ್ರೀಯ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಸರ್ಕಾರಿ ಶಾಲಾ ನೇಮಕಾತಿಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಸಿಬಿಐ ಸುಮಾರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

- Advertisement -

ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳನ್ನು ಸಾರ್ವಜನಿಕ ಹಗರಣ ಎಂದು ಕರೆದ ಕಲ್ಕತ್ತಾ ಹೈಕೋರ್ಟ್ ನ ಆದೇಶದ ಹಿನ್ನೆಲೆಯಲ್ಲಿ ಚಟರ್ಜಿ ಸಿಬಿಐ ಮುಂದೆ ಹಾಜರಾಗಿದ್ದರು.



Join Whatsapp