8ನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ: ಸನ್ನಿ ಡಿಯೋಲ್‌ಗೆ ಟಿಕೆಟ್ ಮಿಸ್

Prasthutha|

ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎಂಟನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಡಿಶಾ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದ 11 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಇದಾಗಿದೆ.

- Advertisement -

ನಟ ಮತ್ತು ಗುರುದಾಸ್ ಪುರ ಲೋಕಸಭಾ ಕ್ಷೇತ್ರದ ಸಂಸದ ಸನ್ನಿ ಡಿಯೋಲ್ ಅವ್ರಿಗೆ ಟಿಕೆಟ್ ಮಿಸ್ ಆಗಿದೆ. ಗುರುದಾಸ್ ಪುರ ಲೋಕಸಭಾ ಕ್ಷೇತ್ರದಿಂದ ದಿನೇಶ್ ಸಿಂಗ್ ‘ಬಬ್ಬು’ ಅವರಿಗೆ ಟಿಕೆಟ್ ನೀಡಲಾಗಿದೆ.

23 ಏಪ್ರಿಲ್ 2019ರಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ ಸನ್ನಿ ಡಿಯೋಲ್ ಪಂಜಾಬ್‌ನ ಗುರಿದಾಸ್‌ ಪುರ ಕ್ಷೇತ್ರದಿಂದ 2019ರ ಲಕ್ಷಕ್ಕೆ ಹತ್ತಿರದ ಅಂತರದಿಂದ ಗೆದ್ದಿದ್ದರು. ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದರು.

- Advertisement -

ಪಂಜಾಬ್ ಕಾಂಗ್ರೆಸ್ ಮಾಜಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪತ್ನಿ ಪ್ರಣೀತ್ ಕೌರ್‌ಗೆ ಪಟಿಯಾಲದಿಂದ ಬಿಜೆಪಿ ಟಿಕೆಟ್ ನೀಡಿದೆ. ಇತ್ತ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರವನೀತ್ ಸಿಂಗ್ ಬಿಟ್ಟುಗೆ ಲುಧಿಯಾನದಿಂದ ಬಿಜೆಪಿ ಟಿಕೆಟ್ ನೀಡಿದೆ. ಸುಶೀಲ್ ಕುಮಾರ್ ರಿಂಗ್ ಇತ್ತೀಚೆಗಷ್ಟೆ ಆಮ್ ಆದ್ಮಿ ಪಾರ್ಟಿ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಅವರಿಗೆ ಜಲಂಧರ್‌ನಿಂದ ಟಿಕೆಟ್ ನೀಡಲಾಗಿದೆ.

ಈ ಮೂಲಕ ಬಿಜೆಪಿ ಒಟ್ಟು 411 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ.



Join Whatsapp