ಬಿಜೆಪಿಯವರು ರಾಜಕೀಯ ಪ್ರಚಾರಕ್ಕೆ ಮಾತ್ರ ನಮ್ಮನ್ನು ಬಳಸಿಕೊಂಡಿದ್ದಾರೆ: ಪರೇಶ್ ಮೇಸ್ತಾ ತಂದೆ ಅಸಮಾಧಾನ

Prasthutha|


ಸರಕಾರದಿಂದ ಯಾವುದೇ ಆರ್ಥಿಕ ಸಹಕಾರ ದೊರಕಿಲ್ಲ..

- Advertisement -

ಕಾರವಾರ: ಬಿಜೆಪಿಯು ರಾಜಕೀಯ ಪ್ರಚಾರಕ್ಕೆ ಮಾತ್ರ ನಮ್ಮನ್ನು ಬಳಸಿಕೊಂಡಿದೆ. ಬಿಜೆಪಿ ಸರ್ಕಾರದಿಂದ ಯಾವುದೇ ಆರ್ಥಿಕ ಸಹಕಾರ ದೊರಕಿಲ್ಲ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕೂಡಾ ನಮ್ಮನ್ನು ರಾಜಕೀಯವಾಗಿ ಬಳಸಿಕೊಂಡರು, ಸರಕಾರದಿಂದ 5 ಲಕ್ಷ ರೂ. ಪರಿಹಾರ ಸಿಕ್ಕಿದೆ ಹೊರತು ಬೇರೇನೂ ಸಿಕ್ಕಿಲ್ಲ. ಬಿಜೆಪಿ ಸರಕಾರದಿಂದ ಯಾವುದೇ ಆರ್ಥಿಕ ಸಹಕಾರ ದೊರಕಿಲ್ಲ. ಪ್ರಚಾರಕ್ಕೆ ಮಾತ್ರ ನಮ್ಮನ್ನು ಬಳಸಿಕೊಂಡಿದ್ದಾರೆ ಎಂದು ನೋವು‌ ತೋಡಿಕೊಂಡಿದ್ದಾರೆ.

- Advertisement -

ಸಿಬಿಐ ವರದಿ ಮೇಲೆ ಅಸಮಾಧಾನವಿದೆ, ಎಲ್ಲಾ ಜನಪ್ರತಿನಿಧಿಗಳು ಪರೇಶ್ ಮೇಸ್ತಾ ಪ್ರಕರಣವನ್ನು ಬಳಸಿಕೊಂಡರು. ಸಿಬಿಐ ವರದಿಯ ಬಳಿಕ ಯಾವ ಜನಪ್ರತಿನಿಧಿಯೂ ಕರೆ ಮಾಡಿ ಮಾಡಿಲ್ಲ. ಯಾವ ಪಕ್ಷದಿಂದಲೂ‌ ನಮಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.




Join Whatsapp