2019-20ರಲ್ಲಿ ಬಿಜೆಪಿಗೆ 750 ಕೋಟಿ ರೂ. ಕಾರ್ಪೊರೇಟ್‌ ದೇಣಿಗೆ; ಇತರ ಪಕ್ಷಗಳಿಗೆ ಸಿಕ್ಕ ಮೊತ್ತ ಎಷ್ಟು ನೋಡಿ!

Prasthutha|

ನವದೆಹಲಿ : ಕಾರ್ಪೊರೇಟ್‌ ಮತ್ತು ವೈಯಕ್ತಿಕ ದೇಣಿಗೆ ಸಂಗ್ರಹದ ವಿಷಯದಲ್ಲಿ ಬಿಜೆಪಿ ಕಳೆದ ಏಳು ವರ್ಷಗಳಲ್ಲಿ ಸತತವಾಗಿ ಟಾಪ್‌ ನಲ್ಲಿದೆ. 2019-20ರ ಅವಧಿಯಲ್ಲಿ ಬಿಜೆಪಿ ಸುಮಾರು 750 ಕೋಟಿ ರೂ. ಕಂಪೆನಿಗಳಿಂದ ಮತ್ತು ವೈಯಕ್ತಿಕ ದೇಣಿಗೆ ಪಡೆದಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ ಇದು ಬಹಿರಂಗವಾಗಿದೆ.

ಕಾಂಗ್ರೆಸ್‌ ಪಕ್ಷ 139 ಕೋಟಿ ರೂ. ದೇಣಿಗೆ ಪಡೆದಿದೆ. ಎನ್‌  ಸಿಪಿ 59 ಕೋಟಿ ರೂ., ಟಿಎಂಸಿ 8 ಕೋಟಿ ರೂ. ಸಿಪಿಎಂ 19.6 ಕೋಟಿ ರೂ. ಸಿಪಿಐ 1.9 ಕೋಟಿ ರೂ. ಇದೇ ಅವಧಿಯಲ್ಲಿ ಪಡೆದಿದೆ.

- Advertisement -

ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ನೀಡಿರುವವರಲ್ಲಿ ಪ್ರುಡೆಂಟ್‌ ಎಲೆಕ್ಟೊರಲ್ ಟ್ರಸ್ಟ್‌ (217.75 ಕೋಟಿ ರೂ.), ಜನಕಲ್ಯಾಣ್‌ ಎಲೆಕ್ಟೊರಲ್‌ ಟ್ರಸ್ಟ್‌ (45.95 ಕೋಟಿ ರೂ.), ಜುಪಿಟರ್‌ ಕ್ಯಾಪಿಟಲ್‌ (15 ಕೋಟಿ ರೂ.) ಐಟಿಸಿ ಆಂಡ್‌ ಐಟಿಸಿ ಸಬ್ಸಿಡರೀಸ್‌ (76 ಕೋಟಿ ರೂ.), ಲೋಧಾ ಡೆವಲಪರ್ಸ್‌ (21 ಕೋಟಿ ರೂ.) ಮುಂತಾದ ಕಂಪೆನಿಗಳು ಸೇರಿವೆ.   

- Advertisement -