ಬಿಜೆಪಿಗೆ ಚುನಾವಣೆಯೇ ಮುಖ್ಯ! ಬಂಗಾಳದಲ್ಲಿ ಮುಂದಿನ ಹಂತದ ಚುನಾವಣೆಗಳನ್ನು ಒಂದೇ ಬಾರಿ ನಡೆಸುವುದಕ್ಕೆ ಬಿಜೆಪಿ ವಿರೋಧ !

Prasthutha|

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಾಕಿಯಿರುವ ಮುಂದಿನ ಹಂತಗಳ ಚುನಾವಣೆಗಳನ್ನು ಒಂದೇ ಬಾರಿಗೆ ನಡೆಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.  ಈ ರೀತಿ ಮಾಡುವುದರಿಂದ ಚುನಾವಣೆ ಇನ್ನಷ್ಟೇ ನಡೆಯಬೇಕಿರುವ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಮುಖ್ಯ ಚುನಾವಣಾ ಅಧಿಕಾರಿಯ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

- Advertisement -

ಸಭೆಯಲ್ಲಿ ಹಾಜರಿದ್ದ ಬಿಜೆಪಿ ನಾಯಕ ಸ್ವಪನ್ ದಾಸ್ ಗುಪ್ತ ಒಂದೇ ಸಮಯದಲ್ಲಿ ಬಾಕಿಯುಳಿದಿರುವ ಚುನಾವಣೆಗಳನ್ನು ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷ, ಚುನಾವಣಾ ಆಯೋಗ ವಿಧಿಸಿರುವ ಕೋವಿಡ್-19 ಶಿಷ್ಟಾಚಾರಕ್ಕೆ ಬದ್ಧವಾಗಿರುತ್ತದೆ ಎಂದು ಸ್ವಪನ್ ದಾಸ್ ಗುಪ್ತ ಹೇಳಿದ್ದಾರೆ.  ನಾವು ಉಳಿದ ಚುನಾವಣೆಯ ದಿನಾಂಕವನ್ನು ಒಟ್ಟಿಗೆ ಸೇರಿಸುವುದರ ವಿಷಯವಾಗಿ ಏನನ್ನೂ ಮಾತನಾಡಿಲ್ಲ. 8 ಹಂತಗಳಲ್ಲೇ ಚುನಾವಣೆ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ಸ್ವಪನ್ ದಾಸ್ ಗುಪ್ತ ತಿಳಿಸಿದ್ದಾರೆ.  

ಸ್ವಪನ್ ದಾಸ್ ಅವರ ಈ ಹೇಳಿಕೆಯ ಮಧ್ಯೆಯೇ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಾರಕ್ ಪುರದಲ್ಲಿ ಯಾವುದೇ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸದೆ ಸಾವಿರಾರು ಜನರನ್ನು ಸೇರಿಸಿ ರೋಡ್ ಶೋ ನಡೆಸಿದ್ದರು. ಇದರ ವೀಡಿಯೋಗಳನ್ನು ಖುದ್ದು ಅಮಿತ್ ಶಾ ಅವರೇ ಪೋಸ್ಟ್ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಅವರು ತೀವ್ರ ಟೀಕೆಗಳನ್ನು ಎದುರಿಸಿದ್ದರು.



Join Whatsapp