ನವದೆಹಲಿ: ಜನಸಂಖ್ಯಾ ನಿಯಂತ್ರಣ ಕುರಿತ ಖಾಸಗಿ ಸದಸ್ಯರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವುದಾಗಿ ನಟ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ರವಿ ಕಿಶನ್ ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ಗೋರಖ್ ಪುರ ಕ್ಷೇತ್ರದ ಸಂಸದರಾಗಿರುವ ಕಿಶನ್ ಅವರಿಗೆ ನಾಲ್ವರು ಮಕ್ಕಳು, ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾರೆ.
ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ತಂದಾಗ ಮಾತ್ರ ನಾವು ವಿಶ್ವ ಗುರುವಾಗಲು ಸಾಧ್ಯ. ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ ಎಂದು ಕಿಶನ್ ಹೇಳಿದ್ದಾರೆ. ಮಸೂದೆಯನ್ನು ಮಂಡಿಸಲು ಮತ್ತು ಅದನ್ನು ನಾನು ಏಕೆ ಮಾಡಲು ಬಯಸುತ್ತೇನೆ ಎಂಬುದನ್ನು ಕೇಳಲು ನನಗೆ ಅವಕಾಶ ನೀಡುವಂತೆ ನಾನು ಪ್ರತಿಪಕ್ಷಗಳನ್ನು ವಿನಂತಿಸುತ್ತೇನೆ ಎಂದು ಕಿಶನ್ ಹೇಳಿದರು.