ಬಿಜೆಪಿ ಸಂಸದ ರವಿ ಕಿಶನ್ ರಿಗೆ 3 ಕೋಟಿ ವಂಚನೆ: ಪ್ರಕರಣ ದಾಖಲು

ಗೋರಖ್ಪುರ: ಬಿಜೆಪಿ ಸಂಸದ ಮತ್ತು ನಟ ರವಿ ಕಿಶನ್ ಅವರಿಗೆ ಮುಂಬೈ ಮೂಲದ ಉದ್ಯಮಿಯೊಬ್ಬರು 3.25 ಕೋಟಿ ವಂಚಿಸಿದ್ದಾರೆ ಎಂದು ಆರೋಪಿಸಿ ಕಿಶನ್ , ಗೋರಖ್ಪುರ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉದ್ಯಮಿ ಜೈನ್ ಜಿತೇಂದ್ರ ರಮೇಶ್, ತಾನು ಸಾರ್ವಜನಿಕ ಸಂಪರ್ಕಾಧಿಕಾರಿ ಎಂದು ತಿಳಿಸಿದ್ದು. 2012 ರಲ್ಲಿ ಕಿಶನ್ ರಿಂದ 34 ಲಕ್ಷದ 12 ಚೆಕ್ ಗಳ ಮೂಲಕ 3.25 ಕೋಟಿ ಪಡೆದುಕೊಂಡಿದ್ದನು ಮತ್ತು ಅದನ್ನು ಹಿಂದಿರುಗಿಸುವಂತೆ ಒತ್ತಾಯಿಸಿದಾಗ, ರಮೇಶ್ ಕಿಶನ್ ಅವರಿಗೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

- Advertisement -

ಸಂಸದ ಮತ್ತು ಉದ್ಯಮಿಗೆ ಈ ಹಣದ ವಿಚಾರದಲ್ಲಿ ಹಲವು ಬಾರಿ ಮಾತುಕತೆಗಳು ನಡೆದಿವೆ. ಇದೀಗ ತನಗೆ 3.25 ಕೋಟಿ ಹಣ ವಂಚಿಸಿದ್ದಾನೆ ಎಂದು ಸಂಸದ ಕಿಶನ್ ಉದ್ಯಮಿ ಜೈನ್ ಜಿತೇಂದ್ರ ರಮೇಶ್ ಎಂಬಾತನ ಮೇಲೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.