ಆಗ್ರಾ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಗಾಯಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪ್ರತಿಭಟನೆ ವೇಳೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಿಜೆಪಿ ನಾಯಕನಿಗೆ ಸಹಾಯ ಮಾಡಲು ಯತ್ನಿಸುತ್ತಿರುವ ಬೆಂಬಲಿಗರು ಸುತ್ತುವರಿದ ದೃಶ್ಯಗಳು ವೈರಲ್ ಆಗಿದೆ. ಗಾಯಗೊಂಡ ಅವರನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಸ್ತುತ ಅವರು ಒಳರೋಗಿಯಾಗಿ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಸ್ತುತ ದೆಹಲಿ ಬಿಜೆಪಿ ಘಟಕವು ತಿವಾರಿ ಅವರ ನೇತೃತ್ವದಲ್ಲಿ ಛತ್ ಕೂಟಗಳನ್ನು ನಿಷೇಧಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೂ ಮೊದಲು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವಂತೆ ಅವರು ಮನವಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉತ್ಸವದ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಡಿ.ಡಿ.ಎಂ.ಎ (ಜಿಲ್ಲಾ ವಿಫತ್ತು ನಿರ್ವಹಣಾ ಪ್ರಾಧಿಕಾರ) ಗೆ ಪ್ರಸ್ತಾವನೆಯನ್ನು ಕಳುಹಿಸಬೇಕೆಂದು ಪ್ರತಿಭಟನಾಕಾರರು ದೆಹಲಿ ಸರ್ಕಾರವನ್ನು ಒತ್ತಾಯಿಸಿದರು.
ಕೋವಿಡ್ ನಿಂದಾಗಿ ಛತ್ ಉತ್ಸವವನ್ನು ಈ ವರ್ಷ ನಿರ್ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದ್ದರು. ಸರ್ಕಾರದ ನಡೆಯನ್ನು ಇಂದು ಬಿಜೆಪಿ ಪ್ರತಿಭಟನೆ ಆಯೋಜಿಸಿದೆ.