ರ‍್ಯಾಲಿಯಲ್ಲಿ ಹೆಲ್ಮೆಟ್ ರಹಿತ ಬೈಕ್ ಚಲಾವಣೆ: ಬಿಜೆಪಿ ಸಂಸದನಿಗೆ ಬಿತ್ತು ಬರೋಬ್ಬರಿ 20 ಸಾವಿರ ದಂಡ

Prasthutha|

ನವೆದೆಹಲಿ: ಕೆಂಪು ಕೋಟೆ ಪ್ರದೇಶದಲ್ಲಿ ನಡೆದ ‘ಹರ್ ಘರ್ ತಿರಂಗಾ’ ಬೈಕ್ ರ‍್ಯಾಲಿಯಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಾರೆ. ಈ ಸಂಬಂಧ ತಿವಾರಿ ಮೇಲೆ ದೆಹಲಿ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

- Advertisement -

ಬಿಜೆಪಿ ಸಂಸದ ಹೆಲ್ಮೆಟ್ ಒಂದೇ ಅಲ್ಲದೇ ಪರವಾನಗಿ, ಮಾಲಿನ್ಯ ನಿಯಂತ್ರಣ ಪತ್ರ ಇಲ್ಲದೇ ಬೈಕ್ ಚಲಾಯಿಸುತ್ತಿದ್ದರಿಂದ ದೆಹಲಿ ಸಂಚಾರ ಪೊಲೀಸರು 20 ಸಾವಿರ ದಂಡ ವಿಧಿಸಿದ್ದಾರೆ ಮತ್ತು ವಾಹನ ಮಾಲೀಕನ ವಿರುದ್ಧ ಪ್ರತ್ಯೇಕ ಚಲನ್ ಅನ್ನು ಸಹ ಹೊರಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ತಿವಾರಿ ಟ್ವಿಟರ್ ನಲ್ಲಿ ಕ್ಷಮೆಯಾಚಿಸಿ ದಂಡವನ್ನು ಪಾವತಿಸುವುದಾಗಿ ಹೇಳಿದ್ದಾರೆ .ಇಂದು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕೆ ನನ್ನನ್ನು ಕ್ಷಮಿಸಿ. ನಾನು ಚಲನ್ ನಂತೆ ದಂಡ ಪಾವತಿಸುತ್ತೇನೆ. ನೀವು ಹೆಲ್ಮೆಟ್ ರಹಿತವಾಗಿ ವಾಹನ ಚಲಾಯಿಸಬೇಡಿ , ಸುರಕ್ಷಿತವಾಗಿರಿ. ಕುಟುಂಬ ಮತ್ತು ಸ್ನೇಹಿತರಿಗೆ ನೀವು ಬೇಕು ಎಂದು ಅವರು ಹಂಚಿಕೊಂಡಿದ್ದಾರೆ.

Join Whatsapp