ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರ ತಡೆದು “ದಿ ಕಾಶ್ಮೀರ್ ಫೈಲ್ಸ್” ಪ್ರದರ್ಶಿಸುವಂತೆ ಬಿಜೆಪಿ ಶಾಸಕರ ಒತ್ತಡ !

Prasthutha|

► ಜೇಮ್ಸ್ ಚಿತ್ರ ತೆಗೆದರೆ ರಾಜ್ಯದಲ್ಲಿ ಬಿಜೆಪಿಯನ್ನೇ ತೆಗೆದು ಬಿಸಾಕುತ್ತೇವೆ ಎಂದ ಕನ್ನಡಿಗರು

- Advertisement -

ಬೆಂಗಳೂರು: ಸದ್ಯ ವಿವಾದದ ಸುಳಿಯಲ್ಲಿರುವ ಬಾಲಿವುಡ್ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ವಿರುದ್ಧ ಆಕ್ರೋಶಗಳು ಹೆಚ್ಚಾಗುತ್ತಲೇ ಇದೆ. ಸಿನಿಮಾದಲ್ಲಿ ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಿ ಅವಹೇಳನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದೇ ವೇಳೆ ರಾಜ್ಯದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ‘ಜೇಮ್ಸ್’ ಚಿತ್ರವನ್ನು ತಡೆದು ವಿವಾದಿತ ‘ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಪ್ರದರ್ಶಿಸುವಂತೆ ಬಿಜೆಪಿ ಶಾಸಕರು ಒತ್ತಡ ಹೇರುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿ ಬಂದಿದೆ.


ಪುನೀತ್ ಅಭಿನಯದ ಜೇಮ್ಸ್ ಚಿತ್ರ ಪುನೀತ್ ರಾಜ್ ಕುಮಾರ್ ಜನ್ಮದಿನದಂದು ತೆರೆಕಂಡಿತ್ತು. ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರವನ್ನು ತೆಗೆದು ಹಾಕುವಂತೆ ರಾಜ್ಯ ಬಿಜೆಪಿ ಶಾಸಕರು ಒತ್ತಡ ಹೇರುತ್ತಿದ್ದು ಸದ್ಯ ಅಪ್ಪು ಅಭಿಮಾನಿಗಳನ್ನು ಇದು ಕೆರಳಿಸಿದೆ.

- Advertisement -
Image

ನಿರ್ದಿಷ್ಟವಾಗಿ ಒಂದು ಕೋಮಿನ ವಿರುದ್ಧ ನಿರ್ದೇಶಿಸಲಾದ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಎಲ್ಲಿ, ಅಪ್ಪು ಅಭಿನಯದ ಜೇಮ್ಸ್ ಚಿತ್ರ ಎಲ್ಲಿ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಅಲ್ಲದೇ ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರವನ್ನು ತೆಗೆದರೆ ರಾಜ್ಯದಲ್ಲಿ ಬಿಜೆಪಿಯನ್ನೇ ತೆಗೆದು ಬಿಸಾಕುತ್ತೇವೆ ಎಂದು ಅಭಿಮಾನಿಗಳು ಎಚ್ಚರಿಸಿದ್ದಾರೆ.




Join Whatsapp