ಮುಸ್ಲಿಮರ ಮೀಸಲಾತಿ ತೆಗೆದದ್ದು ಬಿಜೆಪಿ ಸೋಲಿಗೆ ಕಾರಣ: ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್

Prasthutha|

ನಾಗಮಂಗಲ: ಮುಸ್ಲಿಮರ ಮೀಸಲಾತಿ, ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ, ‘ಅನ್ನಭಾಗ್ಯ’ ಯೋಜನೆಯಲ್ಲಿ ನೀಡುವ ಅಕ್ಕಿಯ ಪ್ರಮಾಣ ಕಡಿಮೆ ಮಾಡಿದ್ದು ಮೊದಲಾದ ಕಾರಣಗಳಿಂದ ಬಿಜೆಪಿ ಸೋತಿರಬಹುದು ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಳ್ಳಿಗಳಿಗೆ ಹೋದಾಗಲೆಲ್ಲಾ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ, ಅಕ್ಕಿ ಕಡಿಮೆ ಮಾಡಿರುವ ಬಗ್ಗೆ ಮಹಿಳೆಯರು ದೂರುತ್ತಿದ್ದರು. ಹಲಾಲ್ ಕಟ್ ವಿಚಾರದಲ್ಲೂ ಜನರಿಗೆ ಕೋಪ ಇತ್ತು. ಮುಸ್ಲಿಮರ ಶೇ 4ರಷ್ಟು ಮೀಸಲಾತಿ ತೆಗೆದದ್ದು ತಪ್ಪಾಗಿರ ಬಹುದು. ಆದರೆ, ನನ್ನ ಕ್ಷೇತ್ರದಲ್ಲಿ ಮುಸ್ಲಿಮರು ಬಿಜೆಪಿ ಪರವಾಗಿದ್ದರು’ ಎಂದು ತಿಳಿಸಿದರು.


‘ಕಾಂಗ್ರೆಸ್ ನವರು ನಮ್ಮ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಿದರು. 40 ಪರ್ಸೆಂಟ್ ಸರ್ಕಾರ, ಪೇಸಿಎಂ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದರು’ ಎಂದು ದೂರಿದರು.

Join Whatsapp