ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿಯಿಂದ ಮಹಿಳೆಗೆ ಅವ್ಯಾಚ ಶಬ್ದಗಳಿಂದ ನಿಂದನೆ: ವಿಡಿಯೋ ವೈರಲ್

Prasthutha|

ನವದೆಹಲಿ: ಸ್ಥಳೀಯರಿಗೆ ಸೇರಿದ ಅಪಾರ್ಟ್’ಮೆಂಟ್ ನಲ್ಲಿ ಬಿಜೆಪಿ ಮುಖಂಡನೊಬ್ಬ ಅಕ್ರಮ ಕಾಮಗಾರಿ ಮತ್ತು ಪಾರ್ಕ್ ನಿರ್ಮಾಣ ಮಾಡಿರುವುದನ್ನು ಪ್ರಶ್ನಿಸಿದ ಮಹಿಳೆಯನ್ನು ಸಾರ್ವಜನಿಕವಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಸಿ, ಕೈಯಿಂದ ಥಳಿಸಿದ ಘಟನೆ ದೆಹಲಿಯ ನೋಯ್ಡಾದಲ್ಲಿ ನಡೆದಿದೆ.

- Advertisement -

ದೆಹಲಿಯ ನೋಯ್ಡಾ 93 ಬಿ ಸೆಕ್ಟರ್’ನಲ್ಲಿ ಗ್ರ್ಯಾಂಡ್ ಓಮ್ಯಾಕ್ಸ್ ಎಂಬ ಕಟ್ಟಡದಲ್ಲಿ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ಎಂಬಾತ ಸ್ಥಳೀಯ ನಿವಾಸಿಯಾದ ಮಹಿಳೆ ಮತ್ತು ಆಕೆಯ ಪತಿಗೆ ಬೆದರಿಕೆ ಹಾಕಿ, ಕೈಯಿಂದ ಮಹಿಳೆಗೆ ಹಲ್ಲೆ ನಡೆಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿದ್ದು, ಬಿಜೆಪಿ ಮುಖಂಡ ಅಶ್ಲೀಲ ಪದಬಳಕೆ ಮಾಡಿ ಬೆದರಿಕೆ ಹಾಕಿದ್ದಾರೆ.

- Advertisement -

ಈ ಮಧ್ಯೆ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನೋಯ್ಡಾ ಪ್ರಾಧಿಕಾರ ಮುಖಂಡ ಶ್ರೀಕಾಂತ್ ತ್ಯಾಗಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದು, 15 ದಿನಗಳೊಗಾಗಿ ಅಕ್ರಮ ಕಟ್ಟಡ ಮತ್ತು ಪಾರ್ಕ್ ಅನ್ನು ತೆರವುಗೊಳಿಸುವಂತೆ ಸೂಚಿಸಿದೆ.

Join Whatsapp