‘ಮಸೀದಿಯ ಒಳಗೆ ನುಗ್ಗಿ ಮುಸ್ಲಿಮರನ್ನು ಹುಡುಕಿ ಕೊಲ್ಲುತ್ತೇವೆ’ ಎಂದ ಬಿಜೆಪಿ ಶಾಸಕ: FIR ದಾಖಲು

Prasthutha|

ಅಹ್ಮದ್ ನಗರ: ಮಸೀದಿಯ ಒಳಗೆ ನುಗ್ಗಿ ಮುಸ್ಲಿಮರನ್ನು ಹುಡುಕಿ ಕೊಲ್ಲುತ್ತೇವೆ ಎಂದು ಉದ್ರೇಕಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ನಿತೀಶ್ ರಾಣೆ ವಿರುದ್ಧ ಪ್ರಕರಣ ದಾಖಲಾಗಿದೆ.

- Advertisement -


ರಾಣೆ ಅವರು ಉದ್ರೇಕಕಾರಿ ಭಾಷಣಗಳನ್ನು ನೀಡಿದ್ದಾರೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಈ ಘಟನೆ ನಡೆದಿದೆ.


ಬಿಜೆಪಿ ಶಾಸಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 302, 153 ಮತ್ತು ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -


ಎಐಎಂಐಎಂ ನಾಯಕ ವಾರೀಶ್ ಪಠಾಣ್ ನಿತೀಶ್ ರಾಣೆ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಬಿಜೆಪಿಯು ಚುನಾವಣೆಗೆ ಮುನ್ನ ಕೋಮುಗಲಭೆ ಸೃಷ್ಟಿಸಲು ಬಯಸುತ್ತದೆ ಎಂದು ಆರೋಪಿಸಿದ್ದಾರೆ. 


ಅವರ ವಿರುದ್ಧ ಎರಡು ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ. ಒಂದು ಪ್ರಕರಣ ಶ್ರೀರಾಮಪುರದಲ್ಲಿ ಮತ್ತು ಇನ್ನೊಂದು ತೋಪಖಾನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.



Join Whatsapp