“ಮಸೀದಿಗಾಗಿ ಕೆಡವಲಾದ ಎಲ್ಲಾ ದೇವಸ್ಥಾನಗಳನ್ನು ಪುನರ್ ನಿರ್ಮಿಸಲಿದ್ದೇವೆ”: ಬಿಜೆಪಿ ಶಾಸಕ

Prasthutha|

ಹೊಸದಿಲ್ಲಿ: ದೇಶದಲ್ಲಿ ಮಸೀದಿಗಾಗಿ ಕೆಡವಲಾದ ಎಲ್ಲಾ ದೇವಸ್ಥಾನಗಳನ್ನು ಪುನರ್ ನಿರ್ಮಿಸಲಿದ್ದೇವೆ ಎಂದು ಬಿಜೆಪಿ ಶಾಸಕ ಸಂಗೀತ್ ಸೋಮ್ ಘೋಷಿಸಿದ್ದಾರೆ.

ಮಥುರಾದಲ್ಲಿ ದೇವಸ್ಥಾನವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲು ಅಖಿಲೇಶ್ ಯಾದವ್ ಅವರಿಗೆ ಧೈರ್ಯವಿದೆಯೇ ಎಂದು ಸಂಗೀತ ಸೋಮ್ ಕೇಳಿದರು. ಸಂಘಪರಿವಾರದ ಪಟ್ಟಿಯಲ್ಲಿ ಇರುವ ಸ್ಥಳವಾಗಿದೆ ಮಥುರಾ ಶಾಹಿ ಈದ್ಗಾ ಮಸೀದಿ ಇರುವ ಪ್ರದೇಶ.

- Advertisement -

ಬಾಬರಿ ಮಸೀದಿ ಧ್ವಂಸದ ನಂತರ ಹಿಂದುತ್ವವಾದಿಗಳು ತಮ್ಮ ಮುಂದಿನ ಗುರಿ ಮಥುರಾ ಎಂದು ಘೋಷಿಸಿದ್ದರು. ಇತ್ತೀಚೆಗೆ, ಹಿಂದುತ್ವವಾದಿಗಳು ಶಾಹಿ ಮಸೀದಿ ವಿರುದ್ಧ ದಾಳಿ ನಡೆಸಲು ಮುಂದಾಗಿದ್ದರು.

“ಅಖಿಲೇಶ್ ಯಾದವ್ ಸೀಸನಲ್ ಹಿಂದೂ ಆಗಿದ್ದಾರೆ. ಇಂತಹಾ ರಾಜಕೀಯ ಇಲ್ಲಿ ನಡೆಯುವುದಿಲ್ಲ. ಭಾರತದಲ್ಲಿ ಎಲ್ಲರೂ ಹಿಂದೂಗಳು. ಮುಸ್ಲಿಮರೂ ಹಿಂದೂಗಳೇ. ಹಿಂದುಸ್ಥಾನ ಹಿಂದೂಗಳಿಗೆ ಸೇರಿದ್ದಾಗಿದೆ. ವಿಶ್ವಕರ್ಮ ದೇವಸ್ಥಾನವನ್ನು ನಿರ್ಮಿಸಲಾಗುವುದು ಎಂದು ಅಖಿಲೇಶ್ ಯಾದವ್ ಹೇಳುತ್ತಾರೆ. ರಾಮ ಭಕ್ತರ ಮೇಲೆ ಗುಂಡು ಹಾರಿಸಿ ಲಾಠಿ ಚಾರ್ಜ್ ಮಾಡಿದವರು ಈ ರೀತಿ ಹೇಳುತ್ತಿದ್ದಾರೆ. ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಸೋಮ್ ಹೇಳಿದರು.

- Advertisement -