ಬೆಲೆ ಏರಿಕೆಯನ್ನು ಟೀಕಿಸುವವರು ಊಟ ಮಾಡುವುದು ಬಿಡಬೇಕು : ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

Prasthutha|

ರಾಯ್ಪುರ : ಹಣದುಬ್ಬರವನ್ನು ರಾಷ್ಟ್ರೀಯ ದುರಂತ ಎನ್ನುವವರು ಊಟ ಮಾಡುವುದನ್ನು ಮತ್ತು ಪೆಟ್ರೋಲ್‌ ಬಳಸುವುದನ್ನು ನಿಲ್ಲಿಸಬೇಕು ಎಂದು ಛತ್ತೀಸ್‌ಗಢದ ಮಾಜಿ ಸಚಿವ, ಬಿಜೆಪಿ ಶಾಸಕ ಬ್ರಿಜ್ಮೋಹನ್‌ ಅಗರ್ವಾಲ್‌ ಹೇಳಿದ್ದಾರೆ. ಆ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

- Advertisement -

ಹಣದುಬ್ಬರವನ್ನು ರಾಷ್ಟ್ರೀಯ ವಿಪತ್ತು ಎಂದು ಹೇಳುವವರು ತಿನ್ನುವುದನ್ನು ಮತ್ತು ಕುಡಿಯುವುದನ್ನು ಬಿಡಬೇಕು. ಅವರು ಆಹಾರವನ್ನು ತ್ಯಜಿಸಬೇಕು ಮತ್ತು ಪೆಟ್ರೋಲ್‌ ಬಳಸುವುದನ್ನು ನಿಲ್ಲಿಸಬೇಕು ಎಂದು ಅಗರ್ವಾಲ್‌ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ. ಶಾಸಕರ ಈ ಮಾತುಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಿಜೆಪಿ ಶಾಸಕನ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್‌ ಕೂಡ ಈ ಹೇಳಿಕೆಯನ್ನು ಖಂಡಿಸಿದೆ. ಬೆಲೆ ಏರಿಕೆಯಿಂದ  ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಬಿಜೆಪಿಗೆ ಅರಿವಿಲ್ಲ. ಕೇಂದ್ರವನ್ನು ಟೀಕಿಸಿದವರನ್ನು ಭಾರತ ಬಿಟ್ಟು ತೊಲಗಿ ಎಂದೂ ಇವರು ಹೇಳಬಹುದು ಎಂದು ಕಾಂಗ್ರೆಸ್‌ ಮುಖಂಡ ಶೈಲೇಶ್‌ ನಿತಿನ್‌ ತ್ರಿವೇದಿ ಹೇಳಿದ್ದಾರೆ.

Join Whatsapp