ವಿಧಾನಸಭೆ ಕಲಾಪದ ವೇಳೆ ಅಶ್ಲೀಲ ವೀಡಿಯೋ ನೋಡಿ ಸಿಕ್ಕಿಬಿದ್ದ ಬಿಜೆಪಿ ಶಾಸಕ: ವೀಡಿಯೋ ವೈರಲ್

Prasthutha|

ಅಗರ್ತಲಾ: ವಿಧಾನಸಭಾ ಅಧಿವೇಶನದ ವೇಳೆ ಕರ್ನಾಟಕದ ಕೆಲವು ಬಿಜೆಪಿ ಶಾಸಕರು ಅಶ್ಲೀಲ ವೀಡಿಯೋ ನೋಡಿ ಇಡೀ ದೇಶದಲ್ಲಿ ಬಿಜೆಪಿ ಶಾಸಕರ ಮಾನ ಹರಾಜಾದ ರೀತಿಯಲ್ಲೇ ತ್ರಿಪುರಾದಲ್ಲೂ ಬಿಜೆಪಿ ಶಾಸಕನೋರ್ವ ವಿಧಾನಸಭಾ ಕಲಾಪದಲ್ಲಿ ಅಶ್ಲೀಲ ವೀಡಿಯೋ ನೋಡಿ ಸಿಕ್ಕಿಬಿದ್ದಿದ್ದಾರೆ.

- Advertisement -


ತ್ರಿಪುರಾದ ಬಗ್ಬಾಸಾ ಕ್ಷೇತ್ರದ ಬಿಜೆಪಿ ಶಾಸಕ ಜದಬ್ ಲಾಲ್ ನಾಥ್ ಅವರು ಕಲಾಪದ ವೇಳೆ ತನ್ನ ಮೊಬೈಲ್ ನಲ್ಲಿ ಅಶ್ಲೀಲ ವೀಡಿಯೋ ನೋಡುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ.



Join Whatsapp